ಕುಂಬಳೆ: ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯ ಸಭೆ ಭಾನುವಾರ ಧರ್ಮತ್ತಡ್ಕದ ಗುಂಪೆ ವಲಯ ಕಾರ್ಯಾಲಯದಲ್ಲಿ ನಡೆಯಿತು.
ಸಭೆಯಲ್ಲಿ 2024-2025 ನೇ ಶೈಕ್ಷಣಿಕ ವರ್ಷದಲ್ಲಿ ಎಸೆಲ್ಸಿ ಹಾಗೂ ಪ್ಲಸ್ ಟು ತರಗತಿಗಳಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಪ್ರತಿಭಾವಂತ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಅಭಿನಂದಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಎಸೆಲ್ಸ್ ಎ ಪ್ಲಸ್ ಪಡೆದ ಪವನ್ ರಾಮ ನೇರೋಳು, ನೂತನ್ ಎಡಕ್ಕಾನ, ಚೇತನ್ ಎಡಕ್ಕಾನ, ಅಭಿದೀಪ್ ಯಚ್.ಕೆ. ಬೆಜಪ್ಪೆ, ಪ್ರತೀಕ್ಷಾ ಬಾಯಾಡಿ,ಅನಘ ಕೆ ಕರುವಜೆ, ಪ್ಲಸ್ ಟು ವಿದ್ಯಾರ್ಥಿಗಳಾದ ಅರುಣ ಮರುವಳ, ಆದೀಶ ಕೃಷ್ಣ ಅಮ್ಮಂಕಲ್ಲು ಇವರಿಗೆ ಶಾಲು ಹೊದೆಸಿ, ಫಲ ನೀಡಿ, ದೀಪ ಹಾಗೂ ಅಭಿನಂದನಾ ಪತ್ರವಿರುವ ಫಲಕ ನೀಡಿ ಸನ್ಮಾನಿಸಲಾಯಿತು.
ವಲಯ ಅಧ್ಯಕ್ಷ ಕುಮಾರ ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಕೋಶಾಧಿಕಾರಿ ರಾಜಗೋಪಾಲ ಭಟ್ ಅಮ್ಮಂಕಲ್ಲು, ಸಂಘಟನಾ ಕಾರ್ಯದರ್ಶಿ ವೆಂಕಟಕೃಷ್ಣ ಚೆಕ್ಕೆಮನೆ, ಗುರಿಕಾರರಾದ ಗಣಪತಿ ಭಟ್ ಹಳ್ಳಕೊಡ್ಲು, ಸುಬ್ಬ ಭಟ್ ಎಡಕ್ಕಾನ, ಗೋಪಾಲ ಕೃಷ್ಣ ಭಟ್ ಮಾಣಿ, ವೈದಿಕ ವಿಭಾಗ ತಿರುಮಲೇಶ್ವರ ಭಟ್ ಮರುವಳ, ಮಾತೃ ವಿಭಾಗ ಕಾವೇರಿ ಗುಂಪೆ, ಶಿಷ್ಯ ಮಾಧ್ಯಮ ದಿವ್ಯಾ ಭಾರತಿ ಅಮ್ಮಂಕಲ್ಲು, ವಿದ್ಯಾರ್ಥಿ ವಾಹಿನಿ ನಳಿನಿ ಬೆಜಪ್ಪೆ, ವಲಯದ ಶಿಷ್ಯ ಭಾಂದವರು ಉಪಸ್ಥಿತರಿದ್ದರು. ಹೆತ್ತವರ ಪರವಾಗಿ ಶಂಕರನಾರಾಯಣ ಭಟ್ ನೇರೋಳು ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು.






