ಇತ್ತೀಚಿನ ದಿನಗಳಲ್ಲಿ, ದೇಶ ಮತ್ತು ವಿಶ್ವದ ಹೆಚ್ಚಿನ ಜನರು ಮಧುಮೇಹಕ್ಕೆ ಬಲಿಯಾಗುತ್ತಿದ್ದಾರೆ. ಅದರಂತೆ ಯೂರಿಕ್ ಆಸಿಡ್ ರೋಗಿಗಳ ಸಂಖ್ಯೆಯು ವೇಗವಾಗಿ ಹೆಚ್ಚುತ್ತಿದೆ. ಈ ಎರಡೂ ಕಾಯಿಲೆಗಳು ಜೀವನಶೈಲಿಗೆ ಸಂಬಂಧಿಸಿವೆ. ವಿಶೇಷವಾಗಿ ನಿಮ್ಮ ಹದಗೆಡುತ್ತಿರುವ ಆಹಾರವು ಇಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಅನಾರೋಗ್ಯಕರ ಜೀವನಶೈಲಿ ಮಧುಮೇಹವನ್ನು ಹೆಚ್ಚಿಸುತ್ತವೆ, ಇದರಿಂದಾಗಿ ನಮ್ಮ ದೇಹವು ಅನೇಕ ರೋಗಗಳಿಗೆ ನೆಲೆಯಾಗುತ್ತೆ.. ಪ್ಯೂರಿನ್ ಸಮೃದ್ಧವಾಗಿರುವ ವಸ್ತುಗಳನ್ನು ಸೇವಿಸುವುದರಿಂದ ಯೂರಿಕ್ ಆಮ್ಲ ಹೆಚ್ಚಾಗುತ್ತೆ..
ಯೂರಿಕ್ ಆಮ್ಲವು ಹೃದ್ರೋಗ, ಅಧಿಕ ರಕ್ತದೊತ್ತಡ, ಮೂತ್ರಪಿಂಡದ ಕಲ್ಲುಗಳು ಮತ್ತು ಸಂಧಿವಾತದಂತಹ ಕಾಯಿಲೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಅದನ್ನು ಸಮಯಕ್ಕೆ ನಿಯಂತ್ರಿಸುವುದು ಬಹಳ ಮುಖ್ಯ. ಇದಕ್ಕಾಗಿ ಔಷಧಿಗಳ ಜೊತೆಗೆ ಹಾಗಲಕಾಯಿಯ ರಸವನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಹಾಗಲಕಾಯಿಯ ರಸವನ್ನು ಕುಡಿಯುವುದರಿಂದ ಈ ಎರಡೂ ಕಾಯಿಲೆಗಳು ನಿಯಂತ್ರಣದಲ್ಲಿರುತ್ತವೆ. ಯೂರಿಕ್ ಆಸಿಡ್ ಮತ್ತು ಮಧುಮೇಹದಲ್ಲಿ ಈ ತರಕಾರಿ ಹೇಗೆ ಪ್ರಯೋಜನಕಾರಿ ಎಂದು ಇಲ್ಲಿ ತಿಳಿಯೋಣ..
ಒಂದು ಲೋಟ ಹಾಗಲಕಾಯಿ ರಸವು ನೈಸರ್ಗಿಕವಾಗಿ ಯೂರಿಕ್ ಆಮ್ಲವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಹಾಗಲಕಾಯಿಯು ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಜೊತೆಗೆ ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ಬೀಟಾ-ಕ್ಯಾರೋಟಿನ್ ಮತ್ತು ಪೊಟ್ಯಾಸಿಯಮ್ ಇತ್ಯಾದಿಗಳನ್ನು ಹೊಂದಿರುತ್ತದೆ. ಈ ಅಂಶಗಳು ಗೌಟ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಹಾಗಲಕಾಯಿಯನ್ನು ಮಧುಮೇಹವಿರುವವರಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಹಾಗಲಕಾಯಿಯು ವಿಟಮಿನ್ ಎ, ಸಿ, ವಿಟಾ-ಕ್ಯಾರೋಟಿನ್ ಮತ್ತು ಇತರ ಖನಿಜಗಳು ಮತ್ತು ಫೈಬರ್‌ನಲ್ಲಿ ಸಮೃದ್ಧವಾಗಿದೆ, ಇದರಿಂದಾಗಿ ಇದು ಇನ್ಸುಲಿನ್‌ನಂತೆ ಕಾರ್ಯನಿರ್ವಹಿಸುತ್ತದೆ ಮತ್ತು ಹೆಚ್ಚುತ್ತಿರುವ ಸಕ್ಕರೆ ಮಟ್ಟವನ್ನು ನಿರ್ವಹಿಸುತ್ತದೆ.
ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅರ್ಧ ಕಪ್ ಹಾಗಲಕಾಯಿ ರಸವನ್ನು ಕುಡಿಯಬಹುದು. ಕಹಿ ತೆಗೆದುಹಾಕಲು, ಸ್ವಲ್ಪ ಕಪ್ಪು ಉಪ್ಪು ಅಥವಾ ನಿಂಬೆ ರಸ ಸೇರಿಸಬಹುದು. ಇದನ್ನು ಕುಡಿಯುವುದು ಗೌಟ್ ಮತ್ತು ಸಂಧಿವಾತದಲ್ಲಿ ಪ್ರಯೋಜನಕಾರಿಯಾಗಿದೆ. ಬೇಕಿದ್ದರೆ ಜ್ಯೂಸ್ ಹೊರತುಪಡಿಸಿ ಬೇರೆ ಬೇರೆ ರೀತಿಯ ಹಾಗಲಕಾಯಿ ಕಾದ್ಯಗಳನ್ನು ತಯಾರಿಸಿ ತಿನ್ನಬಹುದು.




