ಮಧೂರು: ಉಳಿಯತ್ತಡ್ಕದ ಖಾಸಗಿ ಕಟ್ಟಡದಲ್ಲಿ ಅಂಚೆ ಶಾಖಾ ಕಚೇರಿ ಆರಂಭಗೊಂಡಿದೆ. ಈ ವರೆಗೆ ಆರ್.ಡಿ.ನಗರ ಅಂಚೆ ಕಚೇರಿ ವ್ಯಾಪ್ತಿಯಲ್ಲಿದ್ದ ಅಂಚೆ ವ್ಯವಹಾರಗಳು ಇನ್ನು ಮುಂದೆ ಮನ್ನಿಪ್ಪಾಡಿ, ಗಣೇಶನಗರ, ಕಾಂತಿಕೆರೆ, ಮೈತ್ರಿ ಕಲೊನಿ, ಆಲಂಗೋಡು ಹೌಸಿಂಗ್ ಕಲೊನಿ, ಹಿದಾಯತ್ ಅಂಚೆ ಕಚೇರಿ ವ್ಯಾಪ್ತಿಯಲ್ಲಿದ್ದ ಎಸ್.ಪಿ.ನಗರ (ಒಂದು ಭಾಗ), ವರ್ಕತ್ತೊಟ್ಟಿ, ಧನ್ವಂತರಿ ನಗರ, ಮಧೂರು ಅಂಚೆ ಕಚೇರಿ ವ್ಯಾಪ್ತಿಯಲ್ಲಿದ್ದ ಎಸ್.ಪಿ.ನಗರ(ಇನ್ನೊಂದು ಭಾಗ), ಮಧೂರು ಗ್ರಾಮ ಪಂಚಾಯತಿ, ಐಎಡಿ ಜಂಕ್ಷನ್, ಶಿರಿಬಾಗಿಲು ಅಂಚೆ ಕಚೇರಿ ವ್ಯಾಪ್ತಿಯಲ್ಲಿದ್ದ ಎಲ್.ಪಿ.ಎಸ್. ಶಾಲೆ ಉಳಿಯತ್ತಡ್ಕ, ಪಳ್ಳಂ ರಸ್ತೆ(ಎಡ ಭಾಗ), ನ್ಯಾಷನಲ್ ನಗರ ರಸ್ತೆ(ಜೈಮಾತಾ ಶಾಲೆ ವರೆಗೆ) ಈ ನೂತನ ಅಂಚೆ ಕಚೇರಿ ವ್ಯಾಪ್ತಿಗೆ ಬರುತ್ತದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಈ ಸಂಬಂಧ ಮಂಗಳವಾರ ನಡೆದ ಸಮಾರಂಭದಲ್ಲಿ ನಗರದ ಪ್ರಧಾನ ಅಂಚೆ ಕಚೇರಿ ಅಧೀಕ್ಷಕಿ ಶೀಲಾ ಪಿ.ಆರ್ ಉದ್ಘಾಟಿಸಿದರು. ಸಹಾಯಕ ಅಧೀಕ್ಷಕಿ ಎನ್.ಟಿ.ಕ್ರಾಂತಿ ಸ್ವರೂಪ್, ಶಾಕಾ ಪೋಸ್ಟ್ ಮಾಸ್ಟರ್ ಶೈಲಜಾ ಕೆ.ಪಿ., ಮಧೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಉಮೇಶ್ ಗಟ್ಟಿ, ವ್ಯಾಪಾರಿ ಮುಖಂಡ ಅಬೂಬಕ್ಕರ್ ಮಧೂರು, ಗ್ರಾ.ಪಂ. ಸದಸ್ಯರಾದ ಹಬೀಬ್ ರಹ್ಮಾನ್, ರತೀಶ್, ಮೈಲ್ ಓವರ್ ಸೀಯರ್ ಗಳಾದ ಬಾಬು ರಾಜನ್ ಕೆ.ಆರ್., ಒ.ರಾಜೀವನ್, ನಿವೃತ್ತ ಅಂಚೆ ಸಿಬ್ಬಂದಿ ವಿಜಯನ್ ಇತರರು ಉಪಸ್ಥಿತರಿದ್ದರು.




.jpg)
