ಸಮರಸ ಚಿತ್ರಸುದ್ದಿ: ಕಾಸರಗೋಡು: ಭಾರತೀಯ ಪ್ರಾಚ್ಯವಸ್ತು ಇಲಾಖೆ ತ್ರಿಶೂರ್ ಸರ್ಕಲ್ ಆಶ್ರಯದಲ್ಲಿ ಕಾಸರಗೋಡು ಬೇಕಲ ಕೋಟೆ ವಠಾರದಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಶಾಸಕ ಸಿ.ಎಚ್.ಕುಂಜಂಬು ಯೋಗ ಕಾರ್ಯಖ್ರಮ ಉದ್ಘಾಟಿಸಿದರು. ಪದ್ಮಶ್ರೀಸತ್ಯನಾರಾಯಣ ಬಳ್ಳೇರಿ ಮುಖ್ಯ ಅತಿಥಿಗಳಾಗಿದ್ದರು. ಪಳ್ಳಿಕ್ಕರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ ಕುಮಾರನ್, ಸದಸ್ಯ ಅಬ್ದುಲ್ಲಾ, ಭಾರತೀಯ ಪ್ರಾಚ್ಯವಸ್ತು ಇಲಾಖೆಯ ಅಧೀಕ್ಷಕ ವಿಜಯಕುಮಾರ್ ಎಸ್ ನಾಯರ್ ಉಪಸ್ಥಿತರಿದ್ದರು.





