HEALTH TIPS

ಕೌನ್ಸೆಲಿಂಗ್ ತರಗತಿಯಲ್ಲೇ ಬಾಲಕಿಗೆ ದೌರ್ಜನ್ಯ-ವೈದ್ಯನ ವಿರುದ್ಧ ಪೋಕ್ಸೋ ಕೇಸು

ಕಾಸರಗೋಡು: ಶಿಕ್ಷಣದಲ್ಲಿ ಹಿಂದುಳಿದಿರುವಕೆ ಬಗ್ಗೆ ಆಯೋಜಿಸಲಾಗಿದ್ದ ಕೌನ್ಸೆಲಿಂಗ್  ತರಗತಿಗೆ ಆಗಮಿಸಿದ್ದ ಶಾಲಾ ವಿದ್ಯಾರ್ಥಿನಿಯನ್ನು ಬಿಗಿದಪ್ಪಿ ಚುಂಬಿಸಿದ ಪ್ರಕರಣಕ್ಕೆ ಸಂಬಂಧಿಸಿ ವೈದ್ಯನೊಬ್ಬನ ವಿರುದ್ಧ ಚಂದೇರ ಠಾಣೆ ಪೊಲೀಸರು ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ. ಕಾಞಂಗಾಡು ಸನಿಹದ ವೈದ್ಯನಿಗೆ ಈ ಕೇಸು.  ಕಲಿಕೆಯಲ್ಲಿ ಮುಂದಿದ್ದ ಬಾಲಕಿ ಕ್ರಮೇಣ ಹಿಂದುಳಿದಿರುವಿಕೆ ಗಮನಿಸಿದ ಶಾಲಾ ಶಿಕ್ಷಕಿಯರು ಈಕೆಯನ್ನು ಕಾಞಂಗಾಡಿನಲ್ಲಿ ನಡೆಯುತ್ತಿರುವ ಕೌನ್ಸೆಲಿಂಗ್ ತರಗತಿಗೆ ಸೇರ್ಪಡೆಗೊಳಿಸಿದ್ದು, ಅಲ್ಲಿನ ವೈದ್ಯ ಈಕೆಗೆ ಕಿರುಕುಳ ನೀಡಿದ್ದನು. 2023ರ ಸೆಪ್ಟಂಬರ್ ತಿಂಗಳಲ್ಲಿ  ಘಟನೆ ನಡೆದಿದ್ದು, ಭಯಗೊಂಡಿದ್ದ ಬಾಲಕಿ ಈ ವಿಷಯ ಯಾರಲ್ಲೂ ಹೇಳಿರಲಿಲ್ಲ. ಪ್ರಸಕ್ತ ಪ್ಲಸ್‍ಟು ತರಗತಿಯಲ್ಲಿ ಕಲಿಯುತ್ತಿರುವ ಬಾಲಕಿಯನ್ನು ಮತ್ತೊಮ್ಮೆ ಕೌನ್ಸೆಲಿಂಗ್‍ಗೆ ಒಳಪಡಿಸಿದಾಗ ವೈದ್ಯ ನಡೆಸಿರುವ ದೌರ್ಜನ್ಯ ಬೆಳಕಿಗೆ ಬಂದಿದೆ. ತನಿಖೆಯನ್ನು ಹೊಸದುರ್ಗ ಠಾಣೆಗೆ ಹಸ್ತಾಂತರಿಸಲಾಗಿದೆ.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries