ಪೆರ್ಲ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಜಿಲ್ಲೆಯ ವಿವಿಧೆಡೆ ಯೋಗ ಕಾರ್ಯಕ್ರಮ ಶನಿವಾರ ಜರುಗಿತು. ಯೋಗಾಸನ ಕಾಸರಗೋಡು ಹಾಗೂ ಯೋಗ ಫಾರ್ ಕಿಡ್ಸ್ ಸಮಸ್ಥೆ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾಸರಗೋಡಿನಲ್ಲಿ ಜರುಗಿತು.
ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್ ಸಮಾರಂಭ ಉದ್ಘಾಟಿಸಿದರು. ಯೋಗಾಸನ ಕಾಸರಗೋಡಿನ ಜಿಲ್ಲಾಧ್ಯಕ್ಷ ರವಿಶಂಕರ ನೆಗಲಗುಳಿ, ನಗರಸಭಾ ಸದಸ್ಯೆ ಹೇಮಲತಾ ಶೆಟ್ಟಿ, ಆಶಾ ಕಾರ್ಯಕರ್ತೆ ಪ್ರಮಿಳಾ ಪಿ, ಶಾಂತೇರಿ ಕಾಮತ್, ಯೋಗ ಶಿಕ್ಷಕಿ ತೇಜ ಕುಮಾರಿ, ಯೋಗ ತರಗತಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
(ಚಿತ್ರ ಮಾಹಿತಿ: ಪೆರ್ಲ ಭಾರತೀ ಸದನದಲ್ಲಿ ಉಕ್ಕಿನಡ್ಕದ ಆಯುರ್ವೇದ ಆಸ್ಪತ್ರೆ ಹಾಗೂ ಇತರ ಸಂಘಟನೆ ಸಹಯೋಗದೊಂದಿಗೆ ಯೋಗಾಭಿನಮನಂ' ಯೋಗ ಕಾರ್ಯಕ್ರಮ ನಡೆಯಿತು.)
ಕೇಂದ್ರ ಸಚಿವ ಸುರೇಶ್‍ಗೋಪಿ ಅವರು ತಿರುವನಂತಪುರದಲ್ಲಿ ಆಯೋಓಜಿಸಲಾಗಿದ್ದ ಅಂತಾರಾಷ್ಟ್ರೀಯ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ವಿಶ್ವ ಯೋಗ ದಿನಾಚರಣೆ ಅಂಗವಾಗಿ ಆರೋಗ್ಯ ಜಾಗೃತಿ ಮೂಡಿಸುವ 'ಯೋಗಾಭಿನಮನಂ' ನಾಲ್ಕು ತಿಂಗಳ ಯೋಗ ಕಾರ್ಯಕ್ರಮಕ್ಕೆ ಪೆರ್ಲದ ಶ್ರೀ ಭಾರತೀ ಸದನದಲ್ಲಿ ಶನಿವಾರ ಚಾಲನೆ ನೀಡಲಾಯಿತು.
ಪಳ್ಳತ್ತಡ್ಕದ ಸಾಂದೀಪನಿ ಯೋಗ ಸೇವಾಲಯ, ಉಕ್ಕಿನಡ್ಕದ ಆಯುರ್ವೇದ ಆಸ್ಪತ್ರೆ, ಭಾರತೀಯ ಮಜ್ದೂರ್ ಸಂಘ ಪೆರ್ಲ, ಬಾಲಗೋಕುಲ, ಭಜನಾ ತಂಡ, ಶಾಲಾ-ಕಾಲೇಜು, ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಪುರಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಯೋಗ ಕಾರ್ಯಕ್ರಮ ಜರುಗಿತು. 'ಯೋಗಾಭಿನಮನಂ' ಕಾರ್ಯಕ್ರಮದ ಪೂರ್ವಭಾವಿಯಾಗಿ ಪೆರ್ಲ ಶ್ರೀ ಭಾರತೀ ಸದನದಲ್ಲಿ ಮಹಿಳೆಯರಿಗಾಗಿ ಒಂದು ವಾರದ ಯೋಗಾಸನ ತರಬೇತಿ ಶಿಬಿರ ಆಯೋಜಿಸಲಾಗಿದ್ದು, ಇದರ ಸಮಾರೋಪ ಶನಿವಾರ ನೆರವೇರಿತು.




.jpg)
