ಮಂಜೇಶ್ವರ: ಹೊಸಂಗಡಿಯ ಆಯುರ್ವೇದ ಔಷಾಲಯದಿಂದ 10ಸಾವಿರ ರೂ. ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮೂಲತ: ಪುತ್ತೂರು ನಿವಾಸಿ, ಹೊಸಂಗಡಿಯಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿರುವ ಅಶ್ರಫ್ ಎಂಬಾತನನ್ನು ಮಂಜೇಶ್ವರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಗ್ರಮಂಜೇಶ್ವರ ಭಟ್ಟರಹಿತ್ತಿಲು ನಿವಾಸಿ ಡಾ. ಬಿ.ಎಂ ಜಗದೀಶ ಎಂಬವರ ಮಾಲಿಕತ್ವದ ಅಂಗಡಿಯಿಂದ ಶುಕ್ರವಾರ ನಸುಕಿನ 2.30ರಿಂದ 3ಗಂಟೆ ಮಧ್ಯೆ ಕಳವು ನಡೆಸಿರುವುದು ಸಿಸಿ ಕ್ಯಾಮರಾ ದೃಶ್ಯಾವಳಿಯಿಂದ ವ್ಯಕ್ತವಾಗಿತ್ತು. ಮಂಜೇಶ್ವರ ಠಾಣೆ ಎಸ್‍ಐ ಉಮೇಶ್ ನೇತೃತ್ವದ ಪೊಲೀಸರ ತಂಡ 24ಯಾಸುಗಳೊಳಗೆ ಆರೋಪಿಯನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.




