ಮಂಜೇಶ್ವರ: ಉದ್ಯಾವರ ತೋಟ ಜಿ.ಎಂ.ಎಲ್. ಪಿ ಶಾಲೆಯಲ್ಲಿ ಪಿ.ಎನ್ ಪಣಿಕ್ಕರ್ ಇವರ ಸ್ಮರಣೆ ದಿನದ ಅಂಗವಾಗಿ ವಾಚನಾ ದಿನಾಚರಣೆ ಮತ್ತು ವಾಚನಾ ಸಪ್ತಾಹ ಸಮಾರಂಭ ಜರಗಿತು. ಮುಖ್ಯಶಿಕ್ಷಕ ಇಸ್ಮಾಯಿಲ್ ಮೀಯಪದವು ಕಾರ್ಯಕ್ರವನ್ನು ಉದ್ಘಾಟಿಸಿ ಟಿ.ಎನ್ ಪಣಿಕ್ಕರ್‍ವರ ಮಾಹಿತಿಗಳನ್ನು ನೀಡಿ ಓದುವಿಕೆಯ ಮಹತ್ವವನ್ನು ತಿಳಿಸಿದರು. ಹಿರಿಯ ಅಧ್ಯಾಪಕ ರವಿಶಂಕರ ನೆಗಳಗುಳಿ ವಾಚನಾ ದಿನದ ಬಗ್ಗೆ ಮಾತನಾಡಿ ಪಿ.ಎನ್ ಪಣಿಕ್ಕರವರ ಹಾದಿಯನ್ನು ಸವಿಸ್ತಾರವಾಗಿ ತಿಳಿಸಿದರು.
ಶಾಲಾ ಗ್ರಂಥಾಲಯದ ಸಂಚಾಲಕಿ ಮುಫೀದ ಟೀಚರ್ ಮಕ್ಕಳಿಗೆ ಪ್ರತಿಜ್ಞೆ ಬೋಧಿಸಿದರು. ಮತ್ತು ವಾಚನಾ ಸಪ್ತಾಹ ಅಂಗವವಾಗಿ ನಡೆಯುವ ಸ್ಪರ್ಧೆಗಳ ಬಗ್ಗೆ ಮಾಹಿತಿ ನೀಡಿದರು. ವಾಚನಾ ದಿನದ ಉದ್ಘಾಟನೆಯ ಅಂಗವಾಗಿ ಪುಸ್ತಕ ಪ್ರದರ್ಶನ ನಡೆಯಿತು. ಎಲ್ಲಾ ಮಕ್ಕಳಿಗೆ ಪುಸ್ತಕಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಎಸ್.ಎಂ.ಸಿ ಉಪಾಧ್ಯಕ್ಷ ಉಮ್ಮರ್ ಆಲಿ ಶುಭ ಹಾರೈಸಿದರು. ಅಧ್ಯಾಪಕ ರವಿಶಂಕರ ಸ್ವಾಗತಿಸಿ, ಅಭಿಲಾಷ್ ರಾವ್ ವಂದಿಸಿದರು.




.jpg)
.jpg)
