ನೀವು ಆರೋಗ್ಯಕರಾದ ಖಾದ್ಯಗಳ ಸವಿಯುವ ಅಭ್ಯಾಸ ಇಟ್ಟುಕೊಂಡಿರಬಹುದು. ಪ್ರತಿಯೊಂದು ಖಾದ್ಯವು ಆರೋಗ್ಯಕರವಾಗಿದ್ದರೆ ರುಚಿಯು ಅದ್ಭುತವಾಗಲಿದೆ. ಹಾಗೆ ಸವಿದ ಬಳಿಕ ಅದ್ಭುತ ಆರೋಗ್ಯ ಪ್ರಯೋಜನಗಳ ನೀಡಬಹುದು. ಇನ್ನು ಇಂತಹ ಪ್ರಯೋಜನಗಳನ್ನು ಹೊಂದಿರುವ ಹತ್ತಾರು ಖಾದ್ಯಗಳನ್ನು ನಾವು ಮಾಡಬಹುದು. ಅದರಲ್ಲೂ ಸೊಪ್ಪಿನಿಂದ ಮಾಡುವಂತಹ ಎಲ್ಲಾ ಖಾದ್ಯಗಳು ಕೂಡ ಆರೋಗ್ಯದ ದೃಷ್ಟಿಯಿಂದ ಉತ್ತಮ ಎನಿಸಲಿದೆ.
ಇನ್ನು ನಾವು ಈ ರೀತಿ ಆರೋಗ್ಯಕರ ಲಾಭಗಳನ್ನು ಹೊಂದಿರುವಂತಹ ನುಗ್ಗೆ ಸೊಪ್ಪಿನ ಪಲ್ಯ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ನುಗ್ಗೆ ಗಿಡ ಎಷ್ಟೊಂದು ಆರೋಗ್ಯಕರ ಪ್ರಯೋಗಜನಗಳ ಹೊಂದಿದೆ ಎಂಬುದು ನಿಮಗೆಲ್ಲಾ ತಿಳಿದಿರಬಹುದು. ನೀವು ಈ ಗಿಡದ ಯಾವುದೇ ಭಾಗವನ್ನು ಬೇಕಾದರೆ ಔಷಧಿಯಾಗಿ ಬಳಸಬಹುದು.

ನುಗ್ಗೆಕಾಯಿ, ನುಗ್ಗೆ ಸೊಪ್ಪು ಹಲವು ರೀತಿಯ ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡಬಹುದು. ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ವಿಟಮಿನ್ ಎ, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಸೇರಿದಂತೆ ಹಲವು ಬಗೆಯ ಅಂಶಗಳಿವೆ. ಹೀಗಾಗಿ ನಮ್ಮ ಆಹಾರದಲ್ಲಿ ಈ ಸೊಪ್ಪು ಅಥವಾ ಕಾಯಿಯನ್ನು ಬಳಸಿದರೆ ನಿಮಗೂ ಉತ್ತಮವಾಗಿರುತ್ತೆ.
ಹಾಗೆ ಈ ನುಗ್ಗೆ ಸೊಪ್ಪು ಸವಿಯುವುದು ಸಕ್ಕರೆ ಕಾಯಿಲೆ ಹೈ ಬಿಪಿ, ಜೀರ್ಣಕ್ರಿಯೆ ಸಮಸ್ಯೆಗಳಿಗೆ ಪರಿಹಾರ ನೀಡಲಿದೆ. ಹಾಗೆ ನಿಮ್ಮ ದೃಷ್ಟಿಗೂ ಕೂಡ ಇದು ಅತ್ಯುತ್ತಮ. ಹೀಗಾಗಿ ನಾವಿಂದು ನುಗ್ಗೆ ಸೊಪ್ಪಿನ ಪಲ್ಯ ಮಾಡಲು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ನೋಡೋಣ.
ನುಗ್ಗೆ ಸೊಪ್ಪಿನ ಪಲ್ಯ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
ನುಗ್ಗೆ ಸೊಪ್ಪು
ಹೆಸರುಬೇಳೆ
ಈರುಳ್ಳಿ
ತೆಂಗಿನಕಾಯಿ ತುರಿ
ಕರಿಬೇವಿನ ಸೊಪ್ಪು
ಬೆಳ್ಳುಳ್ಳಿ
ಅರಿಶಿಣದ ಪುಡಿ
ಜೀರಿಗೆ
ಸಾಸಿವೆ
ಇಂಗು
ಎಣ್ಣೆ
ಒಣ ಮೆಣಸಿನಕಾಯಿ
ಉಪ್ಪು
ನುಗ್ಗೆ ಸೊಪ್ಪಿನ ಪಲ್ಯ ಮಾಡುವ ವಿಧಾನವೇನು?
ಮೊದಲು ನುಗ್ಗೆ ಸೊಪ್ಪನ್ನು ತೊಳೆದು ಹೆಚ್ಚಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಸ್ವಲ್ಪ ನೀರು ಹಾಕಿ ಬಿಸಿ ಮಾಡಿಕೊಳ್ಳಿ. ನಂತರ 1 ಗಂಟೆ ನೆನೆಸಿಟ್ಟಿದ್ದ 1 ಕಪ್ ಹೆಸರು ಬೇಳೆಯನ್ನು ಇದೇ ಪಾತ್ರೆಗೆ ಹಾಕಿಕೊಳ್ಳಿ. ನಂತರ ಉಪ್ಪು ಹಾಕಿ 5 ನಿಮಿಷ ಈ ಹೆಸರು ಬೇಳೆಯನ್ನು ಬೇಯಿಸಿಕೊಳ್ಳಿ. ಒಂದು ಕುದಿಬಂದ ಬಳಿಕ ಒಲೆ ಆಫ್ ಮಾಡಿಕೊಂಡು ಅದನ್ನು ಬದಿಗಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಎಣ್ಣೆ ಬಿಸಿಯಾಗಲು ಬಿಡಿ. ಎಣ್ಣೆ ಬಿಸಿಯಾದ ಬಳಿಕ ಸಾಸಿವೆ, ಇಂಗು, ಜೀರಿಗೆ, ಬೆಳ್ಳುಳ್ಳಿ, ಕರಿಬೇವು, ಒಣ ಮೆಣಸು, ಹಾಕಿಕೊಂಡು ಕಡಿಮೆ ಉರಿಯಲ್ಲಿ 30 ಸೆಕೆಂಡ್‌ಗಳ ಕಾಲ ಈರುಳ್ಳಿಯನ್ನು ಫ್ರೈ ಮಾಡಿಕೊಳ್ಳಿ. ಈಗ ಅರಶಿಣ, ಉಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಈಗ ತೊಳೆದು ಬಿಡಿಸಿಕೊಂಡಿರುವ ನುಗ್ಗೆ ಸೊಪ್ಪನ್ನು ಒಗ್ಗರಣೆಗೆ ಹಾಕಿಕೊಳ್ಳಿ. ಹಾಗೆ ಈ ಮೊದಲು ಬೇಯಿಸಿಕೊಂಡಿದ್ದ ಹೆಸರು ಬೇಳೆಯನ್ನು ಸಹ ನೀರಿನ ಸಮೇತವಾಗಿ ಹಾಕಿಕೊಂಡು ಮಿಶ್ರಣ ಮಾಡಿ. ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಬೇಕು. 2 ರಿಂದ 4 ನಿಮಿಷದಲ್ಲಿ ಸೊಪ್ಪು ಬಾಡಿಕೊಳ್ಳುತ್ತದೆ. ಹೀಗಾದಾಗ ಹಸಿ ತೆಂಗಿನಕಾಯಿ ತುರಿಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ಮತ್ತೆ 3 ನಿಮಿಷ ಬೇಯಲು ಬಿಟ್ಟು ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯ ನುಗ್ಗೆ ಸೊಪ್ಪಿನ ಪಲ್ಯ ರೆಡಿಯಾಗುತ್ತದೆ. ನೀವು ಕೂಡ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.





