ಮುಳ್ಳೇರಿಯ: ಯಕ್ಷಗಾನ ಭಾಗವತಿಕೆಯ ಯುವ ಪ್ರತಿಭೆ ರಚನ ಚಿದ್ಗಲ್ ಅವರಿಗೆ ಸವಣೂರಿನ ಶ್ಲವಣರಂಗ ಪ್ರತಿಷ್ಠಾನದ ವತಿಯಿಂದ ಯಕ್ಷಗಾನ ಭಾಗವತ ದಿ. ರಾಮಚಂದ್ರ ಅರ್ಬಿತ್ತಾಯರ ಸ್ಮರಣಾರ್ಥ ನೀಡುವ ಶ್ರವಣ ಸ್ವರ ಪ್ರಶಸ್ತಿಯನ್ನು ಇತ್ತೀಚೆಗೆ ಪ್ರದಾನ ಮಾಡಲಾಯಿತು.
ರಚನ ಅವರು ಶುಭಾಶ್ ಪಂಜ, ದಿ. ಪದ್ಯಾಣ ಗಣಪತಿ ಭಟ್ಟರಿಂದ ಭಾಗವತಿಕೆ ಕಲಿತಿದ್ದರು. ಪ್ರಸ್ತುತ ವಿಶ್ವವಿನೋದ ಬನಾರಿ ಹಾಗೂ ವೆಂಕಟರಾಮ ಸುಳ್ಯ ಅವರಿಂದ ಯಕ್ಷಗಾನದ ನಡೆಗಳನ್ನು ಅಭ್ಯಸಿಸುತ್ತಿದ್ದಾರೆ. ಇವರು ಸಂಗೀತವನ್ನು ರೇಖಾ ರೇವತಿ ಹೊನ್ನಾಡಿ ಹಾಗೂ ಭರತನಾಟ್ಯವನ್ನು ಸ್ವಸ್ತಿಕಾ ರೈ ಅವರಿಂದ ಕಲಿಯುತ್ತಿದ್ದಾರೆ. ರಚನ ಅವರು ಅಂತಿಮ ಬಿಬಿಎ ವಿದ್ಯಾರ್ಥಿನಿ. ಇವರು ಗೋಪಾಲ ಗೌಡ ಚಿದ್ಗಲ್ ಹಾಗೂ ಹೊನ್ನಮ್ಮ ದಂಪತಿಯ ಪುತ್ರಿ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆನಂದ ಸವಣೂರು, ತಾರಾನಾಥ ಸವಣೂರು ಮೊದಲಾದವರು ಇದ್ದರು.




.jpg)

