ಮಂಜೇಶ್ವರ: ಪಾವೂರು ಪೊಯ್ಯೆ ಶ್ರೀ ಚಾಮುಂಡಿ ಬಂಟ ಪರಿವಾರ ದೈವಗಳ ಆದಿ ಸ್ಥಳದ ಕಟ್ಟೆಯಲ್ಲಿರುವ ಬೃಹತ್ ಮಾವಿನ ಮರ ಬುಧವಾರ ಮಧ್ಯಾಹ್ನ ಬೀಸಿದ ಬಿರುಸಿನ ಗಾಳಿಗೆ ಧರಾಶಾಯಿಯಾಗಿದೆ. ಕಟ್ಟೆ ಜಾತ್ರೆ(ದೊಂಪದ ಜಾತ್ರೆ)ನಡೆಯುವ ಇತಿಹಾಸ ಪ್ರಸಿದ್ಧ ಕಟ್ಟೆಯ ಬೃಹತ್ ಮರ ಮಧ್ಯ ಭಾಗದಿಂದ ತುಂಡಾಗಿ ಬಿದ್ದು,ದ್ದು, ಆಸುಪಾಸು ಯಾರೂ ಇಲ್ಲದ ಕಾರಣ ದುರಂತ ತಪ್ಪಿದೆ. ಮರದ ಒಳ ಭಾಗ ಟೊಳ್ಳಾಗಿದ್ದು, ಭಾರೀ ಗಾಳಿಯಿಂದ ಕೂಡಿದ ಮಳೆಗೆ ಮರ ಮುರಿದು ಬಿದ್ದಿತ್ತು. ಮಾವಿನ ಮರಕ್ಕೆ ಸುಮಾರು 500ವರ್ಷದ ಇತಿಹಾರವಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.


