ಕಾಸರಗೋಡು: ಉದುಮ ಕಾಪ್ಪಿಲ್‍ನ ಹೋಮ್‍ಸ್ಟೇ ಒಂದರಲ್ಲಿ ಯುವತಿಯನ್ನು ಬೆದರಿಸಿ ಮಾನಭಂಗಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಕೊಲೆಪ್ರಕರಣದ ಆರೋಫಿಯೂ ಒಳಗೊಂಡಂತೆ ಇಬ್ಬರನ್ನು ಬೇಕಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾರ ಏರೋಲ್ ಕುನ್ನುಮ್ಮಲ್ ನಿವಾಸಿ ಮಹಮ್ಮದ್ ಇರ್ಫಾನ್ ಹಾಗೂ ಏರೋಲ್ ನಿವಾಸಿ ಎನ್.ಎಸ್ ಅಬ್ದುಲ್ಲ ಬಂಧಿತರು.
ಉದ್ಯೋಗ ಸಂಬಂಧಿ ಕೆಲಸಗಳಿಗಾಗಿ ದ.ಕೇರಳದಿಂದ ಆಗಮಿಸಿದ್ದ ಯುವತಿಯೊಬ್ಬಳ ದೂರಿನ ಮೇರೆಗೆ ಇವರನ್ನು ಬಂಧಿಸಲಾಗಿತ್ತು. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಘಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಯುವತಿ ವಾಸ್ತವ್ಯ ಹೂಡಿದ್ದ ಹೋಮ್‍ಸ್ಟೇ ಕೊಠಡಿಗೆ ಆಗಮಿಸಿದ ತಂಡ ಬಾಗಿಲು ಬಡಿದು, ಅಶ್ಲೀಲವಾಗಿ ಬೈದು ದಾಂಧಲೆ ನಡೆಸಿದ್ದರು. ಈ ಬಗ್ಗೆ ಯುವತಿ ರಿಸೆಪ್ಶನಿಸ್ಟ್‍ಗೆ ಕರೆಮಾಡಿ ನೀಡಿದ ಮಾಃಇತಿಯನ್ವಯ ಪೊಲೀಸರು ಸ್ಥಳಕ್ಕಾಗಮಿಸಿ ಇಬ್ಬರನ್ನೂ ವಶಕ್ಕೆ ತೆಗೆದುಕೊಂಡಿದ್ದರು.
2015ರ ಮೇ 12ರಂದು ಉದುಮ ಕಣ್ಣಂಗುಳದಲ್ಲಿ ಶಾಹುಲ್ ಹಮೀದ್ ಎಂಬವರಿಗೆ ಇರಿದು ಕೊಲೆಗೈದ ಹಾಗೂ ಸಹೋದರಗೆ ಇರಿದು ಗಾಯಗೊಳಿಸಿದ ಪ್ರಕರಣದಲ್ಲಿ ಮಹಮ್ಮದ್ ಇರ್ಷಾದ್ ಆರೋಪಿಯಾಘಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

