ಕಾಸರಗೋಡು: ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿಯ ಕೆಲವು ಭಾಗಗಳಲ್ಲಿ ಭೂಕುಸಿತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ, ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟು, ಜಿಲ್ಲಾಡಳಿತವು ಜೂನ್ 17 ರ ಮಂಗಳವಾರ(ಇಂದು) ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದೆ.
ಜೂನ್ 17 ರಂದು ರಜೆ ಜಿಲ್ಲೆಯ ಶಾಲೆಗಳು, ಕಾಲೇಜುಗಳು, ವೃತ್ತಿಪರ ಕಾಲೇಜುಗಳು, ಕೇಂದ್ರೀಯ ವಿದ್ಯಾಲಯಗಳು, ಬೋಧನಾ ಕೇಂದ್ರಗಳು, ಮದರಸಾಗಳು, ಅಂಗನವಾಡಿಗಳು ಮತ್ತು ವಿಶೇಷ ತರಗತಿಗಳಿಗೆ ಅನ್ವಯಿಸುತ್ತದೆ.
ಈ ಹಿಂದೆ ನಿಗದಿಪಡಿಸಲಾದ ಎಲ್ಲಾ ಪರೀಕ್ಷೆಗಳು (ವೃತ್ತಿಪರ, ವಿಶ್ವವಿದ್ಯಾಲಯ ಮತ್ತು ಇತರ ಇಲಾಖಾ ಪರೀಕ್ಷೆಗಳು ಸೇರಿದಂತೆ) ವೇಳಾಪಟ್ಟಿಯ ಪ್ರಕಾರ ನಡೆಯುತ್ತವೆ. ಪರೀಕ್ಷಾ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಮಾಹಿತಿಗಳಿಗಾಗಿ:
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಕಾಸರಗೋಡು
ದೂರವಾಣಿ: +91 94466 01700 ಸಂಪರ್ಕಿಸಬಹುದು.
ವೆಲ್ಲರಿಕುಂಡು ತಾಲ್ಲೂಕಿನಲ್ಲಿ ಭಾರೀ ಮಳೆ; ಸಂತ್ರಸ್ಥ ಶಿಬಿರ ಆರಂಭ
ಮುಂದುವರೆಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭದ್ರತಾ ಮುನ್ನೆಚ್ಚರಿಕೆಗಳನ್ನು ತೀವ್ರಗೊಳಿಸಿದೆ. ವೆಳ್ಳರಿಕುಂಡು ತಾಲ್ಲೂಕಿನ ಮಾಲೋತ್ ಗ್ರಾಮದ ವೆಸ್ಟ್ ಎಳೇರಿ ಪಂಚಾಯತ್‍ನಲ್ಲಿರುವ ಪರಂಬ ಸರ್ಕಾರಿ ಎಲ್. ಪಿ ಶಾಲೆಯಲ್ಲಿ ಶಿಬಿರವನ್ನು ಪ್ರಾರಂಭಿಸಲಾಗಿದೆ. ಪ್ರಸ್ತುತ 44 ಜನರಿದ್ದಾರೆ. ಈ ಪೈಕಿ 24 ಪುರುಷರು ಮತ್ತು 20 ಮಹಿಳೆಯರು. ಇಬ್ಬರು ಗರ್ಭಿಣಿಯರು, 60 ವರ್ಷಕ್ಕಿಂತ ಮೇಲ್ಪಟ್ಟ ಏಳು ಜನರು ಮತ್ತು ಐದು ವರ್ಷದೊಳಗಿನ ಇಬ್ಬರು ಸೇರಿದಂತೆ ಏಳು ಮಕ್ಕಳು ಶಿಬಿರದಲ್ಲಿದ್ದಾರೆ.
ಇತರ ತಾಲ್ಲೂಕುಗಳಲ್ಲಿ, ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಬೆದರಿಕೆಯನ್ನು ಎದುರಿಸುತ್ತಿರುವ ಕುಟುಂಬಗಳು ತಮ್ಮ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಗೊಳ್ಳುತ್ತಿವೆ. ಕಯ್ಯಾರು ಗ್ರಾಮದಲ್ಲಿ, ಏಳು ವರ್ಷದ ಮಗು ಹೊಳೆಗೆ ಬಿದ್ದು ಸಾವನ್ನಪ್ಪಿದೆ. ಮೃತ ಬಾಲಕ ಸುಲ್ತಾನ್.
ನಿರಂತರ ಭಾರೀ ಮಳೆಯಿಂದಾಗಿ ತೀವ್ರ ಭೂಕುಸಿತದ ಸಾಧ್ಯತೆಯನ್ನು ಪರಿಗಣಿಸಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಚೆರ್ಕಳ-ಬೇವಿಂಜ ವಿಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ (ಎನ್‍ಎಚ್ 66) ನಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲು ನಿರ್ಧರಿಸಿದೆ. ಚೆರ್ಕಳ-ಬೇವಿಂಜ ವಿಭಾಗದ ಸ್ಟಾರ್ ನಗರದಲ್ಲಿನ ಭೂಕುಸಿತ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದರು.
ಈ ಪ್ರದೇಶದಲ್ಲಿ ಈಗಾಗಲೇ ಹಲವಾರು ಸಣ್ಣಪುಟ್ಟ ಭೂಕುಸಿತಗಳು ವರದಿಯಾಗಿವೆ. ಕೇಂದ್ರ ಹವಾಮಾನ ಇಲಾಖೆಯ ಎಚ್ಚರಿಕೆ ಮತ್ತು ಸ್ಥಳದ ಪರಿಶೀಲನೆಯ ಆಧಾರದ ಮೇಲೆ, ಹೆಚ್ಚಿನ ಅಪಘಾತಗಳನ್ನು ತಪ್ಪಿಸಲು ಈ ಮುನ್ನೆಚ್ಚರಿಕೆ ಕ್ರಮಗಳು.
ವಾಹನಗಳನ್ನು ಬೇರೆಡೆಗೆ ಸಂಚಾರ ಬದಲಾಯಿಸಲು ಪೆÇಲೀಸರು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಆಂಬ್ಯುಲೆನ್ಸ್‍ಗಳು ಮತ್ತು ತುರ್ತು ಸೇವಾ ವಾಹನಗಳನ್ನು ಮಾತ್ರ ನಿಯಂತ್ರಿತ ರೀತಿಯಲ್ಲಿ ಹಾದುಹೋಗಲು ಅನುಮತಿಸಲಾಗುವುದು. ಸ್ಥಳೀಯ ನಿವಾಸಿಗಳು ಜಾಗರೂಕರಾಗಿರಬೇಕು. ಭೂಕುಸಿತ ಪೀಡಿತ ಪ್ರದೇಶಕ್ಕೆ ಯಾರೂ ಅನಗತ್ಯವಾಗಿ ಹೋಗಬಾರದು. ಪ್ರದೇಶದ ತಾಂತ್ರಿಕ ತಪಾಸಣೆಗಳನ್ನು ಪೂರ್ಣಗೊಳಿಸಿ ಸುರಕ್ಷಿತವಾಗಿದೆ ಎಂದು ದೃಢಪಡಿಸಿದ ನಂತರ ಶೀಘ್ರದಲ್ಲೇ ಸಂಚಾರವನ್ನು ಪುನಃಸ್ಥಾಪಿಸಲಾಗುವುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ತಿಳಿಸಿದೆ. ದೂರವಾಣಿ- +91 94466 01700.




.webp)

