ಕುಂಬಳೆ: ಕಿದೂರು ದೇವಸ್ಥಾನ ಸನಿಹ ವಾಸವಿರುವ ಮಹಾಬಲ ಭಟ್ ಮರುವಳ, ಅಲ್ಪಕಾಲದ ಅಸೌಖ್ಯದ ಬಳಿಕ ಸೋಮವಾರ ನಿಧನರಾದರು. ಕಿದೂರು ಶ್ರೀಮಹಾದೇವ ದೇವಾಲಯದಲ್ಲಿ ಸುಧೀರ್ಘ ಕಾಲ ಅರ್ಚಕರಾಗಿ, ಕೃಷಿಕರಾಗಿದ್ದ ಇವರು ಸರಳ ಸಜ್ಜನ ನಡವಳಿಕೆಗಳಿಂದ ಜನಮನ್ನಣೆ ಪಡೆದಿದ್ದರು.
ಮೃತರು ಪುತ್ರರಾದ ಮಹಾಬಲ ಭಟ್, ಶಂಕರ ಭಟ್(ಭವಾನಿ ಟೆಕ್ಸ್ ಟೈಲ್ಸ್), ನಾರಾಯಣ ಭಟ್, ಪುತ್ರಿಯರಾದ ಲಕ್ಷ್ಮೀ ಭಟ್ ಪೆಲ್ತಾಜೆ, ಪಾರ್ವತಿ ಭಟ್ ಕುರುವೇರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಇಂದು ಬೆಳಿಗ್ಗೆ ಮನೆ ಪರಿಸರದಲ್ಲಿ ನಡೆಯಲಿದೆ.





