ಬದಿಯಡ್ಕ: ಕುಂಬಳೆ ಪಿರ್ಕ ಕಚೇರಿ ಬದಿಯಡ್ಕದಲ್ಲಿ ಕುಂಬಳೆ ಪಿರ್ಕ ಬಂಟರ ಸಂಘದ ಸಭೆ ಭಾನುವಾರ ಜರಗಿತು. ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ವಕೀಲ ಐ. ಸುಬ್ಬಯ್ಯ ರೈ ಉದ್ಘಾಟಿಸಿದರು. ನಾಯ್ಕಪಿನ ಸಂಘದ ಸ್ವಂತ ಸ್ಥಳದಲ್ಲಿ ಮುಂದಿನ ಉದ್ದೇಶಿತ ಬೃಹತ್ ಬಂಟರ ಸಭಾ ಭವನ ನಿರ್ಮಾಣಕ್ಕೆ ಎಲ್ಲ ಬಂಟರ ಸಹಾಯ ಸಹಕಾರವನ್ನು ಅವರು ಈ ಸಂದರ್ಭ ಕೋರಿದರು. ಬಂಟರ ಸಂಘ ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಬಜದ ಗುತ್ತು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಚಂದ್ರಹಾಸ ರೈ ಪೆರಡಾಲ ಗುತ್ತು, ಜಿಲ್ಲಾ ಜೊತೆ ಕಾರ್ಯದರ್ಶಿ ಗೋಪಾಲಕೃಷ್ಣ ಶೆಟ್ಟಿ ಕುತಿಕ್ಕಾರ್, ಬದಿಯಡ್ಕ ಬಂಟರ ಸಂಘದ ಅಧ್ಯಕ್ಷ ನಿರಂಜನ್ ರೈ ಪೆರಡಾಲ, ಕುಂಬ್ಡಾಜೆ ಬಂಟರ ಸಂಘ ಅಧ್ಯಕ್ಷ ಸಂತೋಷ್ ಕುಮಾರ್ ರೈ, ಬೆಳ್ಳೂರು ಬಂಟರ ಸಂಘ ಅಧ್ಯಕ್ಷ ಮನಮೋಹನ್ ರೈ ಪಿಂಡಗ, ಎಣ್ಮಕಜೆ ಬಂಟರ ಸಂಘ ಅಧ್ಯಕ್ಷ ನಾರಾಯಣ ಆಳ್ವ ಮಾತನಾಡಿದರು. ಪಿರ್ಕ ಸಂಘದ ಅಧ್ಯಕ್ಷರಾಗಿದ್ದ ಪದ್ಮನಾಭ ಶೆಟ್ಟಿ ವಳಮಲೆ ನಿಧನರಾಗಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಜದ ಗುತ್ತು ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಮಂಜೇಶ್ವರ ವಲಯ ಅಧ್ಯಕ್ಷ ದಾಸಣ್ಣ ಆಳ್ವ ಕೂಳೂರು ಬೀಡು ನಿಧನಕ್ಕೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಸಂಘದ ಕಾರ್ಯ ಯೋಜನೆ ಬಗ್ಗೆ ಚರ್ಚಿಸಲಾಯಿತು.
ಕುಂಬಳೆ ಫಿರ್ಕಾ ಪದಾಧಿಕಾರಿಗಳಾದ ಪುಷ್ಪಾ ಕಾಜೂರು, ರವೀಂದ್ರನಾಥ ಶೆಟ್ಟಿ ವಳಮಲೆ, ಸುರೇಶ್ ಶೆಟ್ಟಿ ಮೊಟ್ಟೆಕುಂಜ, ಜಯರಾಜ್ ರೈ ಎಡಮುಗೇರು. ಬದಿಯಡ್ಕ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಉಪಸ್ಥಿತರಿದ್ದರು.
ಪಿರ್ಕ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ್ ರೈ ಕೊರೆಕ್ಕಾನ ಸ್ವಾಗತಿಸಿ, ಕೋಶಾಧಿಕಾರಿ ಹರಿಪ್ರಸಾದ್ ರೈ ಮಾಯಿಲೆಂಗಿ ವಂದಿಸಿದರು.

.jpg)
