ಕುಂಬಳೆ: ವಿಶ್ವ ಹಿಂದೂ ಪರಿಷತ್, ಬಜರಂಗ ದಳ, ಮಾತೃಶಕ್ತಿ, ದುರ್ಗಾವಾಹಿನಿ ಇವುಗಳ ಪರಂಬಳ ಕಯ್ಯಾರು ಘಟಕದ ನೇತೃತ್ವದಲ್ಲಿ ಈ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಪೂರ್ವಭಾವಿ ಅವಲೋಕನಾ ಸಭೆ ಪರಂಬಳ ಕಯ್ಯಾರು ಶ್ರೀಭಾರತ ಮಾತಾ ಸೇವಾ ಟ್ರಸ್ಟ್‍ನ ಕಾರ್ಯಾಲಯದಲ್ಲಿ ಜರಗಿತು. ಸಭೆಯಲ್ಲಿ ನೂತನ ಅಷ್ಟಮಿ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ದಾಸಪ್ಪ ಸಾಮಾನಿ, ಈಶ್ವರ ಶೆಟ್ಟಿಗಾರ್, ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಭಟ್ ಪೆರಿಯಪ್ಪಾಡಿ, ಉಪಾಧ್ಯಕ್ಷರಾಗಿ ಜಯಶಂಕರ ಕಯ್ಯಾರು, ವಸಂತ ಎ.ಎಸ್., ಪ್ರಶಾಂತ್ ಶೆಟ್ಟಿಗಾರ್, ಪ್ರಧಾನ ಕಾರ್ಯದರ್ಶಿಯಾಗಿ ಮಂಜುನಾಥ ಕಯ್ಯಾರು, ಜೊತೆ ಕಾರ್ಯದರ್ಶಿಗಳಾಗಿ ಗಣೇಶ್ ಪೆÇನ್ನೆತ್ತೋಡು, ಶಿವಪ್ರಸಾದ್ ಶೆಟ್ಟಿ ಪಿಲಿಯಂದೂರು, ಸಂತೋಷ್ ಪೆರಿಯಪ್ಪಾಡಿ, ಕೋಶಾಧಿಕಾರಿಯಾಗಿ ಗಿರೀಶ್‍ಕುಮಾರ್ ಕಯ್ಯಾರು ಆಯ್ಕೆಯಾದರು.
ಕ್ರೀಡಾ ಸಮಿತಿಯ ಸಂಚಾಲಕರಾಗಿ ಬಾಲಕೃಷ್ಣ ಪರಂಬಳ, ನಿತಿನ್ ಪರಂಬಳ, ಸಾಂಸ್ಕøತಿಕ ಸಮಿತಿಯ ಸಂಚಾಲಕರಾಗಿ ಸತೀಶ್‍ಕುಮಾರ್ ಕಾಪು, ದಿವಾಕರ ಪೆÇನ್ನೆತ್ತೋಡು, ನೀರಾವರಿ ಸಮಿತಿಯ ಸಂಚಾಲಕರಾಗಿ ಕಿರಣ್ ಮೂಲಾನ, ಚಂದ್ರಶೇಖರ ಬಿ.ಸಿ.ರೋಡ್, ಊಟೋಪಚಾರ ಸಮಿತಿಯ ಸಂಚಾಲಕರಾಗಿ ಸುಶಾಂತ್ ಜೋಡುಕಲ್ಲು, ಪುಷ್ಪರಾಜ್ ಕೊಕ್ಕೆಜಾಲು ಅವರನ್ನು ಆರಿಸಲಾಯಿತು.

.webp)
