ಬದಿಯಡ್ಕ: ಬೇಳದ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕೆಲಸಗಳ ಬಗ್ಗೆ ಕ್ಷೇತ್ರದ ಶಿಲ್ಪಿಗಳಾದ ಮುನಿಯಂಗಳ ಕೃಷ್ಣಪ್ರಸಾದ ಅವರು ಶ್ರೀಕ್ಷೇತ್ರಕ್ಕೆ ಆಗಮಿಸಿ ಜೀರ್ಣೋದ್ಧಾರ ಕೆಲಸಗಳ ಬಗ್ಗೆ ವೀಕ್ಷಿಸಿ ಸಲಹೆ ಸೂಚನೆಯನ್ನಿತ್ತರು.
ದೇವಸ್ಥಾನದ ಭೋಜನ ಶಾಲೆಯ ಮೇಲ್ಭಾಗದ ಕಾಂಕ್ರೀಟೀಕರಣ, ಅತಿಥಿಗೃಹ ನಿರ್ಮಾಣ, ನೂತನ ಪಾಕಶಾಲೆ, ತೆಂಕು ಗೋಪುರ, ಭದ್ರತಾ ಕೊಠಡಿ, ಹೊರಾಂಗಣ ಶಿಲಾವರಣ ಕೆಲಸಗಳ ಬಗ್ಗೆ ಸಲಹೆಗಳನ್ನು ಅವರು ಈ ಸಂದರ್ಭ ನೀಡಿದರು.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಉಪಸ್ಥಿತರಿದ್ದರು. ನಿರ್ಮಾಣ ಸಮಿತಿಯ ಸಂಚಾಲಕ ರಾಮಚಂದ್ರ ಶಾಸ್ತ್ರಿ, ಪ್ರಕಾಶ್ ಕುಲಾಲ್, ಉದಯ ಬಂಡ್ರಡ್ಕ, ಹಾಗೂ ಜೀರ್ಣೋದ್ಧಾರ ಸಮಿತಿಯ ಸದಸ್ಯರಾದ ಸುಬ್ರಹ್ಮಣ್ಯ ಅಡಿಗ ಬೇಳ, ರಾಮಕೃಷ್ಣ ಹೆಬ್ಬಾರ್, ಶ್ರೀಧರ ಪ್ರಸಾದ್, ಶಿವಕುಮಾರ್ ಕೊಡ್ವಕೆರೆ, ರಾಮ ಏಣಿಯರ್ಪು, ಹರಿಕೃಷ್ಣ ಮಯ್ಯ, ರಾಮಪ್ಪ ಮಂಜೇಶ್ವರ ಉಪಸ್ಥಿತರಿದ್ದರು.

.jpg)
