ನವದೆಹಲಿ: ಇರಾನ್ ವಿರುದ್ಧ ದಾಳಿ ನಡೆಸಲು ಅಮೆರಿಕದ ಯುದ್ಧ ವಿಮಾನಗಳು ಭಾರತೀಯ ವಾಯುಪ್ರದೇಶವನ್ನು ಬಳಸಿಕೊಂಡಿವೆ ಎಂಬ ಸುದ್ದಿಯನ್ನು ಭಾರತವು ತಳ್ಳಿ ಹಾಕಿದೆ. ಸಾಮಾಜಿಕ ಜಾಲತಾಣಗ ಕೆಲವು ಖಾತೆಗಳಲ್ಲಿ ಈ ಬಗ್ಗೆ ಸುದ್ದಿ ಹಂಚಿಕೊಳ್ಳಲಾಗಿದೆ. ಆದರೆ, ಇದು ನಕಲಿ ಸುದ್ದಿ ಎಂದು ಭಾರತವು ಸ್ಪಷ್ಪಡಿಸಿದೆ.
ಆಪರೇಷನ್ ಮಿಡ್‌ನೈಟ್ ಹ್ಯಾಮರ್ ಕಾರ್ಯಾಚರಣೆ ವೇಳೆ ಇರಾನ್ ವಿರುದ್ಧ ವಿಮಾನಗಳನ್ನು ಹಾರಿಸಲು ಅಮೆರಿಕವು ಭಾರತೀಯ ವಾಯುಪ್ರದೇಶವನ್ನು ಬಳಸಿ ಕೊಂಡಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳು ಹೇಳಿಕೊಂಡಿದ್ದವು. ಆದರೆ, ಇದು ಸುಳ್ಳು ಎಂದು ಪಿಐಬಿ ಫ್ಯಾಕ್ಟ್ ಚೆಕ್ ಟ್ವಿಟರ್‌ನಲ್ಲಿ ತಿಳಿಸಿದೆ. ಅಲ್ಲದೆ, ಅಮೆರಿಕದ ಯುದ್ಧವಿಮಾನಗಳು ಯಾವ ವಾಯು ಸೀಮೆಯನ್ನು ಬಳಸಿದವು ಎಂದು ಭಾನುವಾರವೇ ಅಮೆರಿಕ ಸರಕಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದೆ.




