ನವದೆಹಲಿ: ಏರ್‌ಇಂಡಿಯಾ ವಿಮಾನ ಪತನದ ತನಿಖೆಗಾಗಿ ಕೇಂದ್ರ ಸರ್ಕಾರ ರಚಿಸಿರುವ ಉನ್ನತ ಮಟ್ಟದ ಸಮಿತಿಯು ಸೋಮವಾರ ಮಧ್ಯಾಹ್ನ ಸಭೆ ಸೇರಲಿದೆ ಎಂದು ಮೂಲಗಳು ತಿಳಿಸಿವೆ.
ಗೃಹ ಕಾರ್ಯದರ್ಶಿ ಅವರ ನೇತೃತ್ವದ ಸಮಿತಿಯು ಮೂರು ತಿಂಗಳಲ್ಲಿ ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆ ಇದೆ.
ಸಮಿತಿಯು, 'ಭವಿಷ್ಯದಲ್ಲಿ ಇಂಥ ಅವಘಡಗಳ ತಡೆಗಾಗಿ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಜಾರಿ' ಬಗ್ಗೆ ಹೆಚ್ಚಿನ ಗಮನ ನೀಡಲಿದೆ ಎಂದು ಹೇಳಲಾಗಿದೆ.




