ಕಾಸರಗೋಡು: ವಿಶ್ವ ಹಿಂದೂ ಪರಿಷತ್(ವಿಹಿಂಪ)ಕಾಸರಗೋಡು ಪ್ರಖಂಡ ವಾರ್ಷಿಕ ಸಮಾವೇಶ ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ಕ್ಷೇತ್ರದಲ್ಲಿ ಜರುಗಿತು. ವಿಎಚ್‍ಪ ಕಾಸರಗೋಡು ಪ್ರಖಂಡ ಅಧ್ಯಕ್ಷ ಗುರುಪ್ರಸಾದ್ ಕೋಟೆಕಣಿ ಅಧ್ಯಕ್ಷತೆ ವಹಿಸಿದ್ದರು.
ವಿಹಿಂಪ ಕಣ್ಣೂರು ವಿಭಾಗ ಕಾರ್ಯದರ್ಶಿ ಚಂದ್ರಶೇಖರನ್ ಸಮಾರಂಭ ಉದ್ಘಾಟಿಸಿ, ಸಂಘಟನಾ ಕಾರ್ಯಪ್ರವೃತ್ತಿಯ ಬಗ್ಗೆ ಮಾಹಿತಿ ನೀಡಿದರು. ಎಲ್ಲಾ ಪ್ರಖಂಡಗಳಲ್ಲಿ ನವಾತ್ರಿ ಕಾಲಾವಧಿಯಲ್ಲಿ ದುರ್ಗಾವಾಹಿನಿ ವತಿಯಿಂದ ಪಥಸಂಚಲನ, ಆಯುಧ ಪೂಜೆ, ದೀಪಾವಳಿಗೆ ಗೋಪೂಜೆ, ಶ್ರೀ ಕೃಷ್ಣ ಜನ್ಮಾಷ್ಟಮಿ ಇತ್ಯಾದಿ ಹಬ್ಬಗಳನ್ನು ಅಲ್ಲದೆ ಹಿಂದುಗಳ ವಿವಿಧ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಕಾರ್ಯಕರ್ತರು ಗಮನಹರಿಸುವಂತೆ ಸೂಚನೆ ನೀಡಿದರು. ವಿಎಚ್‍ಪಿ ಕಾಸರಗೋಡು ಪ್ರಖಂಡ ಗೌರವಾಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ವಿಎಚ್ ಪಿ ಜಿಲ್ಲಾ ಕಾರ್ಯದರ್ಶಿ ಗಣೇಶ್ ಮಾವಿನಕಟ್ಟೆ, ವಿಎಚ್ ಪಿ ಕೇರಳ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂಕಪ್ಪ ಭಂಡಾರಿ, ಪ್ರಖಂಡ ಉಪಾಧ್ಯಕ್ಷ ಕೆ.ಎನ್. ರಾಮಕೃಷ್ಣ ಹೊಳ್ಳ, ಪ್ರಧಾನ ಕಾರ್ಯದರ್ಶಿ ಗಣೇಶ್ ಬೀರಂತಬೈಲ್, ನವೀನ್ ಕೊರಕ್ಕೋಡು ಉಪಸ್ಥಿತರಿದ್ದರು.
ಈ ಸಂದರ್ಭ ಕಾಸರಗೋಡು ಪ್ರಖಂಡ ದುರ್ಗಾವಾಹಿನಿಯ ಸಂಯೋಜಕಿಯಾಗಿ ಸ್ವಾ ನವೀನ್ ಕೊರಕ್ಕೋಡು, ಮಾತೃಶಕ್ತಿ ಸಹ ಸಂಯೋಜಕಿಯಾಗಿ ದಿವ್ಯ ಸಂದೀಪ್ ನಾಗರಕಟ್ಟೆ ಅವರನ್ನು ಆಯ್ಕೆಮಾಡಲಾಯಿತು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.





