ಕಾಸರಗೋಡು: ವಿಶ್ವ ಪರಿಸರ ದಿನದ ಅಂಗವಾಗಿ ಕಾಸರಗೋಡು ಜಿಲ್ಲಾ ಸ್ವಚ್ಛತಾ ಮಿಷನ್ ಮತ್ತು ಕಾಸರಗೋಡು ನಗರಸಭೆ ಜಂಟಿಯಾಗಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪರಿಸರ ದಿನವನ್ನು ಕಾಸರಗೋಡು ಜಿಎಚ್‍ಎಸ್ ಶಾಲೆಯಲ್ಲಿ ಆಚರಿಸಲಾಯಿತು.
ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಸಸಿ ನೆಡುವ ಮೂಲಕ ಸಮಾರಂಭ ಉದ್ಘಾಟಿಸಿದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕ್ಕಾಡ್ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಜಹೀರ್ ಆಶಿಫ್, ಲೋಕೋಪಯೋಗಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿಯಾನ ಹನೀಫ್, ನಗರಸಭಾ ಕಾರ್ಯದರ್ಶಿ ಅಬ್ದುಲ್ ಜಲೀಲ್ ಡಿ.ವಿ., ಮತ್ತು ಮುಖ್ಯ ಶಿಕ್ಷಕಿ ಉಷಾ ಉಪಸ್ಥಿತರಿದ್ದರು. ಶುಚಿತ್ವ ಮಿಷನ್ ಜಿಲ್ಲಾ ಸಂಯೋಜಕ ಪಿ.ಜಯನ್ ಕಾರ್ಯಕ್ರಮದಲ್ಲಿ ಸ್ವಚ್ಛತಾ ಸಂದೇಶ ನೀಡಿದರು. ಒಂದು ತಿಂಗಳ ಕಾಲ ನಡೆಯುವ ಅಭಿಯಾನದ ಬಗ್ಗೆ ವಿವರಣೆ ನೀಡಲಾಯಿತು. ನವಕೇರಳ ಸಹ-ಸಂಯೋಜಕ ಎಚ್. ಕೃಷ್ಣ, ಕಾರ್ಯಕ್ರಮ ಅಧಿಕಾರಿ ರಂಜಿತ್, ಸಹಾಯಕ ಸಂಯೋಜಕಿ ರೇವತಿ, ಯಂಗ್ ಪ್ರೊಫೆಶನಲ್ ಸುಮೇಶ್, ಕ್ಲೀನ್ ಕೇರಳ ಸಂಸ್ಥೆ ಪ್ರತಿನಿಧಿ ಮಿಥುನ್ ಗೋಪಿ, ಆರೋಗ್ಯ ಇಲಾಖೆ, ಹಸಿರು ಕ್ರಿಯಾ ಸೇನೆಯ ಸಿಬ್ಬಂದಿ, ಶಿಕ್ಷಕರು, ಬೋಧಕೇತರ ಸಿಬ್ಬಂದಿ ಮತ್ತು ಸದಸ್ಯರು ಭಾಗವಹಿಸಿದ್ದರು.
'ಮರುಬಳಕೆ ಅಭಿಯಾನ' ಅಂಗವಾಗಿ, ಮಕ್ಕಳಿಂದ ಹಳೇ ಚೀಲಗಳನ್ನು ಸಂಗ್ರಹಿಸಿ ಕ್ಲೀನ್ ಕೇರಳ ಕಂಪನಿಗೆ ನೀಡಲಾಯಿತು. ಪರಿಸರ ಸ್ನೇಹಿ ವಿಧಾನವನ್ನು ಉತ್ತೇಜಿಸಲು ಸಸಿಗಳನ್ನು ನೆಡಲಾಯಿತು. ಸ್ವಚ್ಛತಾ ಪ್ರತಿಜ್ಞೆ ಮತ್ತು ಸನ್ಮಾನ ಸಮಾರಂಭವನ್ನು ನಡೆಸಲಾಯಿತು. ಜಾರಿ ದಳದ ನಾಯಕ ಕೆ.ವಿ. ಮೊಹಮ್ಮದ್ ಮದನಿ ಸ್ವಾಗತಿಸಿದರು ಮತ್ತು ಕ್ಲೀನ್ ಸಿಟಿ ವ್ಯವಸ್ಥಾಪಕ ಮಧುಸೂದನನ್ ವಂದಿಸಿದರು.



