ಕಣ್ಣೂರು: ಕಣ್ಣೂರು ಕಾರ್ಪೋರೇಷನ್ ಕೌನ್ಸಿಲ್ ಸಭೆಯಲ್ಲಿ ಬೀದಿ ನಾಯಿ ದಾಳಿಗೆ ಕಣ್ಣೂರು ಕಾಪೆರ್Çರೇಷನ್ ಕಾರಣ ಎಂದು ಆರೋಪಿಸಿ ಸಿಪಿಎಂ ಸದಸ್ಯರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಮೇಯರ್ ವೇದಿಕೆಯ ಮೇಲೆ ಹತ್ತಿ ಮೈಕ್ರೊಪೋನ್ ಕಿತ್ತುಕೊಂಡರು. ಕೌನ್ಸಿಲ್ ಸಭೆ ಪ್ರಾರಂಭವಾಗುವ ಮುನ್ನ, ಸಿಪಿಎಂ ಕಾರ್ಯಕರ್ತರು ಸಭಾಂಗಣದ ಹೊರಗೆ ಪ್ರತಿಭಟನೆ ನಡೆಸಿದರು.
ಸಭೆ ಪ್ರಾರಂಭವಾದ ನಂತರ, ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗಿದರು ಮತ್ತು ಪ್ರತಿಭಟಿಸಲು ಫಲಕಗಳನ್ನು ಹಿಡಿದಿದ್ದರು. ಮಂಗಳವಾರ ಮತ್ತು ಬುಧವಾರ ನಿಗಮ ವ್ಯಾಪ್ತಿಯಲ್ಲಿ 70 ಕ್ಕೂ ಹೆಚ್ಚು ಜನರನ್ನು ಬೀದಿ ನಾಯಿಗಳು ಕಚ್ಚಿವೆ.





