ಮುಳ್ಳೇರಿಯ: ಬೆಳ್ಳೂರು ಗ್ರಾ.ಪಂ. ಕುಟುಂಬಶ್ರೀ ನೇತೃತ್ವದಲ್ಲಿ ಕಿನ್ನಿಂಗಾರು ಮಕ್ಕಳ ಪುನರ್ವಸತಿ ಕೇಂದ್ರದ (ಎಂ.ಸಿ.ಆರ್.ಸಿ.) ಪ್ರವೇಶ ಸಮಾರಂಭವನ್ನು ಗ್ರಾ.ಪಂ. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ ಉದ್ಘಾಟಿಸಿದರು. ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷೆ ಗೀತಾ ಕೆ., ಸದಸ್ಯೆ ಗೀತಾ ಬಿ.ಎನ್., ಸಹಾಯಕ ಕಾರ್ಯದರ್ಶಿ ಜಿನೀಶ್, ಕೆ.ಎಸ್.ಎಸ್.ಎಂ.ಸಂಯೋಜಕ ರಾಜೇಶ್, ಐಸಿಡಿಎಸ್ ಮೇಲ್ವಿಚಾರಕಿ ಶೀಬಾ ಶುಭ ಹಾರೈಸಿದರು. ಕುಟುಂಬಶ್ರೀ ಜಿಲ್ಲಾ ಮಿಷನ್ ಕಾಸರಗೋಡು "ಸ್ನೇಹಿತ" ಕೌನ್ಸಿಲರ್ ಶೋಭನಾ ಪೆÇೀಷಕರಿಗೆ ತರಗತಿ ನೀಡಿದರು. ಸಿಡಿಎಸ್ ಅಧ್ಯಕ್ಷೆ ಸಿ.ಪಿ.ಮಾಲಿನಿ ಸ್ವಾಗತಿಸಿದರು. ಸದಸ್ಯೆ ಆಶಾ ವಂದಿಸಿದರು. ಬಡ್ಸ್ ಶಾಲೆಯ ವಿಶೇಷ ಶಿಕ್ಷಕಿ ಅರುಣ್ ಎಂ.ಪಿ. ನಿರೂಪಿಸಿದರು. ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.




.jpg)
