HEALTH TIPS

ತುಂಬಾ ಹತ್ತಿರದಿಂದ ಕೂತು ಟಿವಿ ನೋಡ್ತೀರಾ? ಇದು ಡೇಂಜರ್.. ಈ ಬಗ್ಗೆ ನೀವು ತಿಳಿದುಕೊಳ್ಳಬೇಕು!

ಹಿರಿಯರಿಂದ ಕಿರಿಯರವರೆಗೆ ಟಿವಿಯ ಮುಂದೆ ಕುಳಿತರೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ನಮಗೆ ಬೇಕಾದ ಹಾಗೆ ಚಾನಲ್ ಬದಲಿಸುತ್ತಾ ಗಂಟೆ ಗಟ್ಟಲೆ ಟಿವಿ ಮುಂದೆ ಕುಳಿತುಕೊಳ್ಳುವ ಅಭ್ಯಾಸ ಬಹುತೇಕ ಮಂದಿಗೆ ಇರುತ್ತದೆ. ನಿಮಗೂ ಈ ಅಭ್ಯಾಸ ಇದೆ ಎಂದಾದರೆ ಇಂದೇ ಈ ಅಭ್ಯಾಸವನ್ನು ಬದಲಿಸಿಕೊಳ್ಳಿ.

ಯಾಕೆಂದರೆ ಟಿವಿ ನೋಡುತ್ತಾ ನೋಡುತ್ತಾ ನಿಮಗೆ ಗೊತ್ತಿಲ್ಲದಂತೆ ನಿಧಾನವಾಗಿ ರೋಗಕ್ಕೆ ಹತೀರವಾಗುತ್ತಿರುತ್ತೀರಿ. 4 ಗಂಟೆಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಟಿವಿ ನೋಡುತ್ತಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದು ಅಧ್ಯಾಯನದಿಂದ ಸಾಬೀತಾಗಿದೆ.

ತುಂಬಾ ಹತ್ತಿರದಿಂದ ಟಿವಿ ನೋಡುವುದು ಕಣ್ಣಿಗೆ ಹಾನಿಕಾರಕ ಎಂದು ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ. ಹಾಗಾದರೆ ಟಿವಿಯನ್ನು ಎಷ್ಟು ದೂರದಿಂದ ನೋಡಬೇಕು ಎಂಬ ಬಗ್ಗೆ ನಿಮಗೆ ತಿಳಿದಿದ್ಯಾ?

ಹೌದು, ಟಿವಿಯನ್ನು ಎಷ್ಟು ದೂರದಿಂದ ಕುಳಿತು ನೋಡಬೇಕು ಎಂದು ಜಪಾನಿನ ಟೆಲಿವಿಷನ್ ತಯಾರಕ ಸೋನಿ ಕಾರ್ಪೊರೇಶನ್​​ನ ವೆಬ್​ಸೈಟ್​​ನಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ಟಿವಿಯ ಲಂಬ ಗಾತ್ರಕ್ಕಿಂತ ಕನಿಷ್ಠ 6 ಪಟ್ಟು ದೂರದಿಂದ ಟಿವಿಯನ್ನು ವೀಕ್ಷಿಸಬೇಕು ಎಂದು ತಿಳಿಸಲಾಗಿದೆ

ಅಂದಹಾಗೇ, ನೀವು 24 ಇಂಚಿನ ಟಿವಿ ನೋಡುತ್ತಿದ್ದರೆ, ಕನಿಷ್ಠ 3 ಅಡಿ ದೂರದಿಂದ ಟಿವಿ ನೋಡಬೇಕು. ಹಾಗೆಂದ ಮಾತ್ರಕ್ಕೆ ದೂರದಿಂದ ಟಿವಿ ನೋಡುವುದು ಎಂದಲ್ಲ 24 ಇಂಚಿನ ಟಿವಿಯನ್ನು ಗರಿಷ್ಠ 5 ಅಡಿ ದೂರದಿಂದ ನೋಡಬೇಕು.

ಅದೇ ರೀತಿ, 32-ಇಂಚಿನ ಟಿವಿಯನ್ನು ಕನಿಷ್ಠ 6 ಅಡಿ ಮತ್ತು ಗರಿಷ್ಠ 7 ಅಡಿ ದೂರದಿಂದ ವೀಕ್ಷಿಸುವುದು ಉತ್ತಮ. ಮತ್ತೆ, 43 ಇಂಚಿನ ಟಿವಿ ನೋಡುವಾಗ ಕನಿಷ್ಠ 6 ಅಡಿ ಅಂತರವನ್ನು ಇಟ್ಟುಕೊಳ್ಳಬೇಕು ಈ ಗಾತ್ರದ ಟಿವಿಗಳಿಗೆ ಗರಿಷ್ಠ 8 ಅಡಿ ಅಂತರ ಕಾಯ್ದುಕೊಳ್ಳುವುದು ಉತ್ತಮ. 50 ರಿಂದ 55 ಇಂಚಿನ ಟಿವಿಗಳಿಗೆ ಕನಿಷ್ಠ 10 ಅಡಿ ಅಂತರ ಕಾಯ್ದುಕೊಳ್ಳಬೇಕು ಗರಿಷ್ಠ 12 ಅಡಿ ದೂರದಿಂದ ನೋಡಿದಾಗ ಈ ಗಾತ್ರದ ಟಿವಿ ನಿಖರವಾಗಿರುತ್ತದೆ.

ಒಂದು ವೇಳೆ ನೀವು ದೊಡ್ಡ ಟಿವಿ ನೋಡುವಾಗ ಎಷ್ಟು ದೂರ ಕುಳಿತುಕೊಳ್ಳಬೇಕು ಎಂಬುದನ್ನು ನೀವೇ ಅರ್ಥಮಾಡಿಕೊಳ್ಳಬೇಕು. ಏಕೆಂದರೆ ಟಿವಿ 60 ಇಂಚು ಅಥವಾ ದೊಡ್ಡದಾಗಿದ್ದರೆ, 9 ಅಡಿಗಿಂತ ಕಡಿಮೆ ದೂರದಿಂದ ನೋಡಿದರೆ ಟಿವಿಯಲ್ಲಿ ಬರುವ ದೃಶ್ಯ ಸ್ಪಷ್ಟವಾಗಿ ಕಾಣಿಸುವುದಿಲ್ಲ.

ಯಾವುದೇ ಟಿವಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಪರದೆಯ ಮೇಲಿನ ಪಿಕ್ಸೆಲ್ ಗಳು ಚಿಕ್ಕ ಬಾಕ್ಸ್ ಗಳಂತೆ ಕಾಣುವುದರಿಂದ ಟಿವಿಯಲ್ಲಿ ಬರುವ ಚಿತ್ರ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಇದಲ್ಲದೇ, ಟಿವಿಯ ಬಲವಾದ ಕಿರಣಗಳು ಕಣ್ಣುಗಳನ್ನು ಹಾನಿಗೊಳಿಸುತ್ತವೆ ಎಂದು ವೈದ್ಯರು ಹೇಳುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries