ಕಾಸರಗೋಡು: ಸಂಯುಕ್ತ ಟ್ರೇಡ್ ಯೂನಿಯನ್ ವತಿಯಿಂದ ಜುಲೈ 9ರಂದು ನಡೆಯಲಿರುವ ರಾಷ್ಟ್ರೀಯ ಮುಷ್ಕರಕ್ಕೆ ಪೂರ್ವಭಾವಿಯಾಗಿ ಉತ್ತರ ವಲಯ ವಾಹನ ಮೆರವಣಿಗೆ ಕಾಸರಗೋಡಿನಿಂದ ಆರಂಭಗೊಂಡಿತು.
ಜಾಥಾ ಮುಖಂಡ, ಸಿಐಟಿಯು ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಎನ್. ಗೋಪಿನಾಥನ್ ಅವರು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಪಿ. ರಾಜೇಂದ್ರನ್ ಅವರಿಗೆ ಧ್ವಜವನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಎಐಟಿಯುಸಿ ರಾಜ್ಯ ಸಮಿತಿ ಕಾರ್ಯದರ್ಶಿ ಸಜಿಲಾಲ್, ಜಾಥಾ ವ್ಯವಸ್ಥಾಪಕಿ ಓ.ಕೆ. ಸಂಧ್ಯಾ, ಜಾಥಾ ಸದಸ್ಯರು ಮತ್ತು ಕಾರ್ಮಿಕ ಸಂಘದ ನಾಯಕರಾದ ಟಿ.ಕೆ. ರಾಜನ್, ಎಲಿಜಬೆತ್ ಅಸೀಹಾ, ಪಿ.ವಿ. ತಂಬಾನ್, ಎ.ಎನ್. ಸಲೀಂ ಕುಮಾರ್, ಶೀನ್ ವಲ್ಲಿ, ಓ.ಟಿ. ಸುಜೇಶ್, ಎಂ.ಉನ್ನಿಕೃಷ್ಣನ್, ರಜಿಯಾ ಜಾಫರ್, ಹಂಸ ಪುಲ್ಲತ್ತಿಲ್, ಆರ್.ಸುರೇಶ್, ವಿ.ಕುಂಜಾಲಿ, ಅಬ್ದುಲ್ ರಹಮಾನ್ ಮಾಸ್ಟರ್, ಪಿ.ಕೃಷ್ಣನ್ ನಾಯರ್ ಉಪಸ್ಥಿತರಿದ್ದರು. ಕೆ.ರವೀಂದ್ರನ್ ಸ್ವಾಗತಿಸಿದರು.

