ಕಾಸರಗೋಡು: ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ, ಕಾಸರಗೋಡಿನ ಸಾಮಾಜಿಕ ನ್ಯಾಯ ಕಚೇರಿ, ಜಿಲ್ಲಾ ಪೆÇಲೀಸ್ ಮತ್ತು ವಿದ್ಯಾರ್ಥಿ ಪೆÇಲೀಸ್ ಕಾಸರಗೋಡಿನ ಜಂಟಿಯಾಗಿ ವಿದ್ಯಾನಗರದ ನಗರಸಭಾ ಕ್ರೀಡಾಂಗಣದಲ್ಲಿ ಮಾದಕ ದ್ರವ್ಯ ವಿರುದ್ಧ ಸಂದೇಶ ರ್ಯಾಲಿ ಆಯೋಜಿಸಿತು. ವಿದ್ಯಾನಗರದ ನಗರಸಭಾ ಸ್ಟೇಡಿಯಂ ವಠಾರದಿಂದ ಆರಂಭಿಸಿದ ಆವರಣದಿಂದ ಆರಂಭಗೊಂಡ ಮಾದಕ ದ್ರವ್ಯ ವಿರೋಧಿ ಸಂದೇಶ ರಯಾಳಿಗೆ ಕಾಸರಗೋಡು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯಭರತ್ ರೆಡ್ಡಿ (ಐಪಿಎಸ್) ಚಾಲನೆ ನೀಡಿದರು.
ಬ್ರೇಕ್ ದಿ ಸೈಕಲ್":
ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ರಾಜ್ಯ ಸರ್ಕಾರದ ಅಬಕಾರಿ ಇಲಾಖೆಯ ವಿಮುಕ್ತಿ ಮಿಷನ್ ಜಿಲ್ಲಾ ವಿಭಾಗವು ಅಂತರರಾಷ್ಟ್ರೀಯ "ಬ್ರೇಕ್ ದಿ ಸೈಕಲ್" ಎಂಬ ಸಂದೇಶದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿತು.
ಕಾಞಂಗಾಡಿನ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಶಾಸಕ ಇ. ಚಂದ್ರಶೇಖರನ್ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿನ ಒಳ್ಳೆಯದು ಮತ್ತು ಕೆಟ್ಟದ್ದನ್ನು ಅರ್ಥೈಸಿಕೊಳ್ಳುವುದರ ಜತೆಗೆ ಮಾದಕ ವಸ್ತುಗಳಂತಹ ಮಾರಕ ಉತ್ಪನ್ನಗಳನ್ನು ಎಂದಿಗೂ ಬಳಸದಿರುವ ಮತ್ತು ಇತರರನ್ನು ಇದರಿಂದ ವಿಮುಖರನ್ನಾಗಿ ಮಾಡುವ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿ ಕಾರ್ಯೋನ್ಮುಖರಾಗಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಕಾಞಂಗಾಡ್ ನಗರಸಭಾ ಅಧ್ಯಕ್ಷೆ ಕೆ.ವಿ. ಸುಜಾತ ಅಧ್ಯಕ್ಷತೆ ವಹಿಸಿದ್ದರು. ಕಾಞಂಗಾಡ್ ಡಿವೈಎಸ್ಪಿ ಬಾಬು ಪೆರಿಂಙÉೂೀತ್ ಮಾದಕ ದ್ರವ್ಯ ವಿರೋಧಿ ಸಂದೇಶ ನೀಡಿದರು. ಜಿಲ್ಲಾ ಸಹಾಯಕ ಅಬಕಾರಿ ಆಯುಕ್ತ ಪಿ.ಪಿ.ಜನಾರ್ದನನ್ ಜಾಗೃತಿ ಕಾರ್ಡ್ ವಿತರಣೆಯನ್ನು ಉದ್ಘಾಟಿಸಿದರು. ಅಬಕಾರಿ ಹೊಸದುರ್ಗ ವೃತ್ತ ನಿರೀಕ್ಷಕ ವಿ.ವಿ.ಪ್ರಸನ್ನ ಕುಮಾರ್ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆ ಬೋಧಿಸಿದರು. ರಾಜ್ಯ ಶಾಲಾ ಕಲೋತ್ಸವದ ಗಾಯನ ವಿಭಾಗದಲ್ಲಿ ಹಲವಾರು ಬಹುಮಾನಗಳನ್ನು ಗೆದ್ದ ಶಾಲಾ ವಿದ್ಯಾರ್ಥಿ ಮಹಿಪಾಲ್ ಮಾದಕ ದ್ರವ್ಯ ವಿರೋಧಿ ಗೀತೆಯನ್ನು ಪ್ರದರ್ಶಿಸಿದರು. ವಾರ್ಡ್ ಕೌನ್ಸಿಲರ್ ಎನ್. ಅಶೋಕ್ ಕುಮಾರ್, ದುರ್ಗಾ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಡಾ. ಎನ್ ವೇಣುನಾಥನ್, ಮುಖ್ಯಶಿಕ್ಷಕಿ ಪಿ.ಸುಮಾ, ಪಿ.ಟಿ.ಎ. ಅಧ್ಯಕ್ಷ ಪಿ.ವಿನೋದ್ ಕುಮಾರ್, ಕೆ.ಎಸ್.ಇ.ಎಸ್.ಎ. ಜಿಲ್ಲಾಧ್ಯಕ್ಷ ಪಿ.ನಿಶಾದ್, ವಿಮುಕ್ತಿ ಕ್ಲಬ್ ಪ್ರಭಾರಿ ಶಿಕ್ಷಕ ಕೆ.ವಿ. ಜಯನ್ ಉಪಸ್ಥಿತರಿದ್ದರು. ಜಿಲ್ಲಾ ಸಹಾಯಕ ಅಬಕಾರಿ ಆಯುಕ್ತ ಹಾಗೂ ವಿಮುಕ್ತಿ ವ್ಯವಸ್ಥಾಪಕ ಅನ್ವರ್ ಸಾದತ್ ಸ್ವಾಗತಿಸಿದರು. ವಿಮುಕ್ತಿ ಸಂಯೋಜಕಿ ಸ್ನೇಹಾ ವಂದಿಸಿದರು.


