ಜೆರುಸೆಲೇಂ: ಗಾಜಾದ ಕಡೆಗೆ ತೆರಳುತ್ತಿದ್ದ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್, ಇತರ 11 ಜನ ಕಾರ್ಯಕರ್ತರಿದ್ದ ಹಡಗನ್ನು ಇಸ್ರೇಲ್ ಕಡೆಗೆ ತಿರುಗಿಸಲಾಗಿದೆ ಎಂದು ಇಸ್ರೇಲ್ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಆದರೆ, 'ನಮ್ಮ ಕಾರ್ಯಕರ್ತರನ್ನು ಇಸ್ರೇಲಿ ಪಡೆಗಳು ಅಪಹರಿಸಿವೆ' ಎಂದು ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ(ಎಫ್‌ಎಫ್‌ಸಿ) ಆರೋಪಿಸಿದೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಇಸ್ರೇಲ್ ವಿದೇಶಾಂಗ ಸಚಿವಾಲಯ, 'ಹಡಗು ಸುರಕ್ಷಿತವಾಗಿ ಇಸ್ರೇಲ್ ತೀರಕ್ಕೆ ತಲುಪುತ್ತಿದೆ. ಅವರು(ಕಾರ್ಯಕರ್ತರು) ತಮ್ಮ ದೇಶಗಳಿಗೆ ಮರಳುವ ನಿರೀಕ್ಷೆಯಿದೆ' ಎಂದು ತಿಳಿಸಿದೆ.
ಗಾಜಾ ಪಟ್ಟಿಗೆ ಮಾನವೀಯ ನೆರವು ತಲುಪಿಸಲು ಮತ್ತು ಇಸ್ರೇಲ್ ದಿಗ್ಭಂದನದ ವಿರುದ್ಧ ಪ್ರತಿಭಟಿಸಲು ಈ ಪ್ರಯಾಣ ಕೈಗೊಂಡಿದ್ದು, ಫ್ರೀಡಂ ಫ್ಲೋಟಿಲ್ಲಾ ಒಕ್ಕೂಟ(ಎಫ್‌ಎಫ್‌ಸಿ) ಇದರ ನೇತೃತ್ವ ವಹಿಸಿಕೊಂಡಿದೆ.
ಕಳೆದ ವಾರ ಇಟಲಿಯ ಸಿಸಿಲಿಯಿಂದ ಹೊರಟ ಈ ಹಡಗಿನಲ್ಲಿ ಹಾಲಿವುಡ್ ನಟ ಲಿಯಾಮ್ ಕನ್ನಿಂಗ್ಹ್ಯಾಮ್, ಯುರೋಪಿಯನ್ ಪಾರ್ಲಿಮೆಂಟ್‌ನ ಫ್ರೆಂಚ್ ಸದಸ್ಯೆ ರಿಮಾ ಹಸನ್ ಸಹ ಇದ್ದಾರೆ.




