ಕಾಸರಗೋಡು: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ(ಡಿಎಲ್‍ಎಸ್‍ಎ) ಮತ್ತು ಕಾಸರಗೋಡು ಸರ್ಕಾರಿ ಕಾಲೇಜು ವತಿಯಿಂದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರುದ್ಧ ಜಾಗೃತಿ ದಿನವನ್ನು ಆಚರಿಸಲಾಯಿತು. ಸರ್ಕಾರಿ ಕಾಲೇಜಿನ ಮಾದಕ ದ್ರವ್ಯ ವಿರೋಧಿ ಸಮಿತಿ ಆಶ್ರಯದಲ್ಲಿ ಸರ್ಕಾರಿ ಕಾಲೇಜಿನ ಹೊಸ ಸೆಮಿನಾರ್ ಹಾಲ್‍ನಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸಿತ್ತು.
ಡಿಎಲ್‍ಎಸ್‍ಎ ಕಾರ್ಯದರ್ಶಿ ಮತ್ತು ಹಿರಿಯ ವಿಭಾಗೀಯ ಸಿವಿಲ್ ನ್ಯಾಯಾಧೀಶೆ ರುಕ್ಮಾ ಎಸ್. ರಾಜ್ ಸಮಾರಂಭ ಉದ್ಘಾಟಿಸಿದರು. ಕಾಲೇಜು ಪ್ರಾಂಶುಪಾಲ ಡಾ. ವಿ. ಎಸ್. ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಂಶುಪಾಲ ಡಾ. ಪಿ. ವಿ. ಮಿನಿ, ಡಿಎಲ್‍ಎಸ್‍ಎ ವಿಭಾಗ ಅಧಿಕಾರಿ ಎ.ಪಿ. ಕೇಶವನ್ ಉಪಸ್ಥಿತರಿದ್ದರು. ಸಾಮಾಜಿಕ ಪೆÇಲೀಸ್ ವಿಭಾಗದ ಸಬ್ ಇನ್ಸ್‍ಪೆಕ್ಟರ್ ಪಿ.ಕೆ. ರಾಮಕೃಷ್ಣನ್ ತರಗತಿ ನಡೆಸಿದರು. ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಮಡಿದ್ದರು. ಸರ್ಕಾರಿ ಕಾಲೇಜು ಮಾದಕ ದ್ರವ್ಯ ವಿರೋಧಿ ಸಮಿತಿಯ ಸಂಚಾಲಕ ಡಾ. ಯು. ಬಾಲಕೃಷ್ಣನ್ ಸ್ವಾಗತಿಸಿದರು. ಡಿಎಲ್‍ಎಸ್‍ಎ ಪಿಎಲ್‍ವಿ ರಶ್ಮಿ ಸಿ. ಮೋಹನ್ ವಂದಿಸಿದರು.





