ಮಂಜೇಶ್ವರ: ಮೀಯಪದವು ಶ್ರೀವಿದ್ಯಾವರ್ಧಕ ಉನ್ನತ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರದಿನವನ್ನು ಆಚರಿಸಲಾಯಿತು. ಮೀoಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪರಿಸರದ ಬಗ್ಗೆ ಯುವ ಪೀಳಿಗೆ ಜಾಗೃತಿ ವಹಿಸುವುದು ಹಾಗೂ ಪರಿಸರದ ಮೇಲೆ ವಿಶೇಷ ಕಾಳಜಿ ತೋರಿಸುವುದು ಕಾಲಘಟ್ಟದ ಅನಿವಾರ್ಯತೆ ಎಂದು ಅವರು ಅಭಿಪ್ರಾಯಪಟ್ಟರು.
ಶಾಲಾ ಸಂಚಾಲಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಮೀಂಜ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಮೀಂಜ ಸಹಕಾರಿ ಸಂಘದ ಅಧ್ಯಕ್ಷ ರಘುನಾಥ್ ಶೆಟ್ಟಿ, ಮಂಜೇಶ್ವರ ಸಹಕಾರಿ ಸಂಸ್ಥೆಗಳ ಸಹಾಯಕ ರಿಜಿಸ್ಟಾರ್ ರವಿಶಂಕರ ಮೀಂಜ, ಕೃಷಿ ಭವನ ಅಧಿಕಾರಿ ಚಂಚಲ ಶುಭಹಾರೈಸಿದರು. ಪರಿಸರ ದಿನದ ಮಹತ್ವಗಳ ಬಗ್ಗೆ ಮಕ್ಕಳಿಗೆ ಸಂದೇಶಗಳನ್ನು ನೀಡಲಾಯಿತು ಆಯುಷ್ ಇಲಾಖೆ ವತಿಯಿಂದ ಔಷಧ ಗುಣವುಳ್ಳ ಸಸ್ಯಗಳನ್ನು ನೆಡಲಾಯಿತು. ಸ್ಥಳೀಯಾಡಳಿತ, ಪಂಚಾಯತಿ ಆರೋಗ್ಯ ಇಲಾಖೆ ಸಹಾಯಕರು, ಶಾಲಾ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




.jpg)
.jpg)

