ಮಂಜೇಶ್ವರ: ಇತ್ತೀಚೆಗೆ ನಿಧನರಾದ ಮೀಯಪದವು ಶ್ರೀ ವಿದ್ಯಾವರ್ಧಕ ಹೈಸ್ಕೂಲ್ ನ ನಿವೃತ್ತ ಕನ್ನಡ ಅಧ್ಯಾಪಕ, ರಾಜಕೀಯ ನೇತಾರ ಪಿ.ವಿ.ಭಟ್ ಅವರಿಗೆ ಶಾಲಾ ಸಭಾಂಗಣದಲ್ಲಿ ವಿವಿಧ ಗಣ್ಯರ ಸಮ್ಮುಖದಲ್ಲಿ ಶ್ರದ್ಧಾಂಜಲಿ ಸಭೆ ಭಾನುವಾರ ನಡೆಯಿತು. ರಾಜಕೀಯ ನೇತಾರ, ಕ್ಯಾಂಪ್ಕೊ ಮಾಜಿ ಉಪಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ, ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕ, ನಿವೃತ್ತ ಮುಖ್ಯ ಅಧ್ಯಾಪಕ ಶ್ರೀಧರ ರಾವ್ ಮೀಯಪದವು. ಮುಖ್ಯ ಶಿಕ್ಷಕ ಅರವಿಂದಾಕ್ಷ ಭಂಡಾರಿ, ಶ್ರೀವಿದ್ಯಾವರ್ಧಕ ಹೈಸ್ಕೂಲ್ ನಿವೃತ್ತ ಮುಖ್ಯ ಶಿಕ್ಷಕರಾದ ಎಸ್.ಬಿ. ಕಣಿಯೂರು ಹಾಗೂ ರಾಜಾರಾಮ ರಾವ್, ಸಾಹಿತಿ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಕೆ.ಎಮ್.ಅನ್ಸಾರಿ ಅವರು ಅಗಲಿದ ಪಿ.ವಿ. ಭಟ್ ಅವರ ಸಂಸ್ಮರಣೆ ಮಾಡಿದರು.
ಶ್ರೀವಿದ್ಯಾವರ್ಧಕ ಉನ್ನತ ಪ್ರೌಢ ಶಾಲಾ ಪ್ರಾಂಶುಪಾಲ ರಮೇಶ್ ಕೆ.ಎನ್, ಹೈಸ್ಕೂಲ್ ಮುಖ್ಯ ಅಧ್ಯಾಪಿಕೆ ಮೃದುಲಾ, ಹರಿಶ್ಚಂದ್ರ ಮಂಜೇಶ್ವರ, ಉಭಯ ಶಾಲೆಗಳ ಶಿಕ್ಷಕ ಹಾಗೂ ನಿವೃತ್ತ ಅಧ್ಯಾಪಕ ವೃಂದ, ಊರ ಹಿತೈಷಿ ಗಣ್ಯರು ಉಪಸ್ಥಿತರಿದ್ದರು. ಶಾಲಾ ಸಂಚಾಲಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಹಿರಿಯ ಅಧ್ಯಾಪಕ ಕಿರಣ್ ಸ್ವಾಗತಿಸಿ, ನಿರೂಪಿಸಿದರು.




.jpg)

