ಬದಿಯಡ್ಕ: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆಯು ಜುಲೈ 10 ರಿಂದ ಸೆಪ್ಟೆಂಬರ್ 7 ರವರೆಗೆ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಎಡನೀರು ಶ್ರೀಮಠದಲ್ಲಿ ಜರಗಲಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಊರ ಪರಪೂರ ಭಕ್ತಾದಿಗಳ ಮಹಾಸಭೆ ಭಾನುವಾರ ಸಂಜೆ ಎಡನೀರು ಶ್ರೀಮಠದಲ್ಲಿ ಜರಗಿತು.
ಎಡನೀರು ಶ್ರೀಗಳು ಆಶೀರ್ವಚನ ನೀಡಿ, ಶ್ರದ್ಧಾ-ಭಕ್ತಿಗಳಿಂದ ಆಚರಿಸಲ್ಪಡುವ ಚಾತುರ್ಮಾಸ್ಯ ವ್ರತಾಚರಣೆ ಭಗವದನುಗ್ರಹ ಹಾಗೂ ಸಕಲರ ನೆರವಿನೊಂದಿಗೆ ಯಶಸ್ವಿಗೊಳ್ಳಲಿದೆ. ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಭಕ್ತಿಸಾಂಧ್ರತೆಯೊಂದಿಗೆ ಮಂಗಳಕರವಾಗಲಿ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರೊ.ಎ. ಶ್ರೀನಾಥ್ ಕಾಸರಗೋಡು, ಮಾಧವ ಹೇರಳ, ಕೆ.ವಿ. ಬಾಲಕೃಷ್ಣನ್, ಅರ್ಜುನ್ ತಾಯಂಗಾಡಿ, ಶಂಕರನಾರಾಯಣ ಭಟ್, ದಿವಾಣ ಶಿವಶಂಕರ ಭಟ್, ಸತೀಶ್ ಎಡನೀರು, ಗಿರೀಶ್ ಮುನಿಯಾಲ, ಹರೀಶ್ ಬಳಂತಿಮೊಗರು, ವಿನಯ, ಪುರುಷೋತ್ತಮ್ ಭಟ್, ಮಹೇಶ ವಳಕ್ಕುಂಜ ಮೊದಲಾದವರು ಮಾತನಾಡಿದರು. ಎಡನೀರು ಶ್ರೀಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ, ನಿವೃತ್ತ ವಿದ್ಯಾಧಿಕಾರಿ ವೇಣುಗೋಪಾಲ ವಂದಿಸಿದರು. ಸೂರ್ಯ ಭಟ್ ಎಡನೀರು ಕಾರ್ಯಕ್ರಮ ನಿರೂಪಿಸಿದರು. ವೆಂಕಟ್ ಭಟ್ ಎಡನೀರು ಸಹಕರಿಸಿದರು.




.jpg)
.jpg)

