ಉಪ್ಪಳ : ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಸಿ.ಡಿ.ಎಸ್. ಉಪಾಧ್ಯಕ್ಷೆ ನಸೀಮಾ ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಿ.ಆರ್.ಸಿ ತರಬೇತುದಾರೆ ಸುಮಯ್ಯ ಹಾಗೂ ಸಿ.ಡಿ.ಎಸ್. ಸದಸ್ಯೆ ಫೌಸ್ಯಾ ಅವರು ವಿಶೇಷ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಖ್ಯೋಪಾಧ್ಯಾಯನಿ ಚಿತ್ರಾವತಿ ಚಿಗುರುಪಾದೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಕ್ಕಳಿಂದ ಪರಿಸರ ಜಾಗೃತಿ ಮೂಡಿಸಲು ಮೆರವಣಿಗೆ, ಹಾಡು ಘೋಷಣೆಗಳ ಮೂಲಕ ಪರಿಸರದ ಮಹತ್ವವನ್ನು ತಿಳಿಸಲಾಯಿತು. ಪರಿಸರ ದಿನದ ಪ್ರತಿಜ್ಞೆಯನ್ನು ಶಿಕ್ಷಕಿ ಐಶ್ವರ್ಯ ಮತ್ತು ಧನ್ಯ ಬೋಧಿಸಿದರು. ಮಕ್ಕಳಿಗೆ ಚಿತ್ರರಚನೆ, ಘೋಷಣಾ ವಾಕ್ಯ ತಯಾರಿ, ತರಕಾರಿ ತೋಟದ ಪೂರ್ವ ತಯಾರಿ ಮೊದಲಾದ ಹಲವು ಚಟುವಟಿಕೆ ಆಯೋಜಿಸಲಾಯಿತು. ಶಿಕ್ಷಕ ಅಬ್ದುಲ್ ಬಶೀರ್ ವಂದಿಸಿದರು.




.jpg)

