HEALTH TIPS

ಮುಗು ಕ್ಷೇತ್ರದಲ್ಲಿ ಸ್ವಯಂಸೇವಕರ ಪರಿಶ್ರಮದಿಂದ ಸುಲಲಿತವಾದ ಪ್ರಥಮ ಹಂತದ ಬೃಹತ್ ಕರಸೇವೆ

ಕುಂಬಳೆ: ಶೇಣಿ-ಮುಗು ಉಭಯ ಗ್ರಾಮಗಳ ಅಧಿಪತಿ ಮುಗು ಶ್ರೀಸುಬ್ರಾಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಪ್ರಥಮ ಹಂತದ ಬೃಹತ್ ಕರಸೇವೆ 

ಸ್ವಯಂಸೇವಕರ ಪರಿಶ್ರಮದಿಂದ ಸುಲಲಿತವಾಗಿ ಭಾನುವಾರ ಸಂಪನ್ನಗೊಂಡಿತು.

ಕಳೆದ ಎರಡೂವರೆ ದಶಕಗಳ ಹಿಂದೆ ಬ್ರಹ್ಮಕಲಶ ಕಳೆದು ಕಾರಣೀಕ ಪ್ರಸಿದ್ಧಿಯನ್ನು ಗಳಿಸಿಕೊಂಡಿರುವ ಕ್ಷೇತ್ರವು ಇದೀಗ ಅಜೀರ್ಣಾವಸ್ಥೆಗೆ ತಲುಪುತ್ತಿರುವುದನ್ನು ಮನಗಂಡು ಭಕ್ತ ಜನಸಹಭಾಗಿತ್ವದಲ್ಲಿ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಇದರಂತೆ ಕ್ಷೇತ್ರದಲ್ಲಿ ಭಾನುವಾರ ಬೃಹತ್ ಶ್ರಮದಾನ ಸಾಂಗವಾಗಿ ಜರಗಿತು. 

ದೇವಸ್ಥಾನದ ಪ್ರಧಾನ ಅರ್ಚಕ ಮಹಾಬಲೇಶ್ವರ ಭಟ್ಟರು ಹಂಚು ತೆಗೆದು ಮೊಕ್ತೇಸರರಾದ ರವೀಂದ್ರ ಮಾಸ್ತರರಿಗೆ ಹಸ್ತಾಂತರಿಸುವ ಮೂಲಕ ಕರಸೇವೆಗೆ ಚಾಲನೆ ನೀಡಿದರು. ಕ್ಷೇತ್ರದ ಪವಿತ್ರಪಾಣಿ, ಆಡಳಿತ ಸಮಿತಿಯ ಸದಸ್ಯ ರಾಮ್ ಕುಮಾರ್ ಮುಜುಕುಮೂಲೆ, ವಿಜಯಕುಮಾರ್ ಪಾರೆ, ಉಮಾಮಹೇಶ್ವರ ಭಟ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಪಳ್ಳ ವೆಂಕಟ್ರಮಣ ಭಟ್, ವೇಣುಗೋಪಾಲ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಪದ್ಮನಾಭ ಆಚಾರ್ಯ, ಪ್ರಸಾದ್ ಕುಂಞÂ ಪದವು, ಮಹಿಳಾ ಸಂಘ, ಷಣ್ಮುಖ ಯುವಕ ವೃಂದ ಹಾಗೂ ಊರ ಹತ್ತು ಸಮಸ್ತರು ಶ್ರಮದಾನದಲ್ಲಿ ಭಾಗವಹಿಸಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries