ಉಪ್ಪಳ: ಕುರುಡಪದವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಯೋಗ ದಿನಾಚರಣೆಯು ಶಾಲಾ ಸಭಾಂಗಣದಲ್ಲಿ ಜರಗಿತು. ಮುಖ್ಯೋಪಾಧ್ಯಾಯ ಪದ್ಮನಾಭ ಬರ್ಲಾಯ ಅವರು ಸ್ವಾಗತಿಸಿದರು. ಶಾಲಾ ಸಿಬ್ಬಂದಿ ಚಿದಾನಂದರು ಯೋಗ ಪ್ರಾತ್ಯಕ್ಷಿಕೆಯನ್ನು ನೀಡಿ ಯೋಗದ ಮಹತ್ವ, ಯೋಗ ಮಾಡುವುದರಿಂದ ನಮ್ಮ ಶರೀರಕ್ಕೆ ಇರುವ ಪ್ರಯೋಜನಗಳನ್ನು ಸವಿವರವಾಗಿ ತಿಳಿಸಿಕೊಟ್ಟರು. ಶಾಲಾ ವಿದ್ಯಾರ್ಥಿಗಳು, ಅಧ್ಯಾಪಕ-ಅಧ್ಯಾಪಿಕೆಯರು ಭಾಗಿಗಳಾಗಿದ್ದರು.





