ಮಂಜೇಶ್ವರ: ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕರಾಗಿ ನಿವೃತ್ತಿ ಹೊಂದಿ ಇದೀಗ ಕಳೆದ 10 ದಿನದಿಂದ ವಿಶ್ರಾಂತ ಜೀವನ ನಡೆಸುತ್ತಿದ್ದ ಹೊಸಂಗಡಿ ಬಳಿಯ ವಾಮಂಜೂರು, ಅಂಗಡಿಪದವು ನಿವಾಸಿ ನಿವೃತ್ತ ಜಿಲ್ಲಾ ವಿದ್ಯಾಧಿಕಾರಿ, ಶಿಕ್ಷಣ ಉಪ ನಿರ್ದೇಶಕ ದಿನೇಶ್ ವಿ. (56) ಇಲಿ ಜ್ವರ ಬಾಧಿಸಿ, ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ಇಂದು ಅಪರಾಹ್ನ 3.ಕ್ಕೆ ನಿಧನರಾದರು. ಮೃತರು ದಿ. ಕುಞ
ರಾಮನ್ - ಅಮ್ಮಣಿ ದಂಪತಿಗಳ ಪುತ್ರರಾಗಿದ್ದು, ಪತ್ನಿ: ಶ್ರೀಲೇಖ.ಕೆ, ಮಕ್ಕಳಾದ: ಶ್ರೀಷ್ಮ, ದೇವಪ್ರಿಯ, ಅಭಿರಾಮ್, ಸಹೋದರಿಯರಾದ: ಅಹಲ್ಯ, ಶೀಲಾವತಿ ಹಾಗೂ ಅಪಾರ ಬಂಧು ಬಳಗವನ್ನು, ಅಧ್ಯಾಪಕ ವೃಂದ, ಶಿಷ್ಯವೃಂದವನ್ನು ಅಗಲಿದ್ದಾರೆ.
ದಿನೇಶ್.ವಿ ಅವರು 16 ವರ್ಷಗಳ ಸುದೀರ್ಘ ಕಾಲ ಕುಂಜತ್ತೂರು ಸರ್ಕಾರಿ ಹೈಸ್ಕೂಲ್ ನಲ್ಲಿ ಭೌತಶಾಸ್ತ್ರ ವಿಭಾಗದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ, ಬಂಗ್ರ ಮಂಜೇಶ್ವರ ಸರ್ಕಾರಿ ಶಾಲೆ, ಎಡನೀರು ಸರ್ಕಾರಿ ಹೈಸ್ಕೂಲ್ ನಲ್ಲಿ ಮುಖ್ಯ್ಯೊಪಾಧ್ಯಯಾರಾಗಿ, ಬಳಿಕ ಆರು ವರ್ಷಗಳ ಕಾಲ ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ, ಎರಡು ವರ್ಷಗಳ ಕಾಲ ಕಾಸರಗೋಡು ಜಿಲ್ಲಾ ವಿದ್ಯಾಧಿಕಾರಿಯಾಗಿ, ಕಾಸರಗೋಡು ಜಿಲ್ಲಾ (ಡೆಪ್ಯುಟಿ ಡೈರೆಕ್ಟರ್) ಸಾರ್ವಜನಿಕ ಶಿಕ್ಷಣ ಉಪ ನಿರ್ದೇಶಕರಾಗಿ ಸೇವೆ ಸಲ್ಲಿಸಿ ಮೇ 31 ರಂದು ನಿವೃತ್ತಿ ಹೊಂದಿದ್ದರು. ಈ ನಡುವೆ ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಿವೃತ್ತಿ ಹೊಂದಿ ಕೇವಲ 10 ದಿನಗಳು ಕಳೆದಿದ್ದು, ಪತ್ನಿ ಮಕ್ಕಳ ಜೊತೆ ವಿಶ್ರಾಂತ ಜೀವನ ಸಾಗಿಸುವ ನಡುವೆ ಕಳೆದೆರಡು ದಿನಗಳ ಹಿಂದೆ ಇಲಿ ಜ್ವರ ಭಾದಿಸಿ ಕುಂಬಳೆಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ನಡುವೆ ಜ್ವರ ಉಲ್ಬಣಿಸಿದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತಿತ್ತು. ಈ ವೇಳೆ ನಿಧನರಾದರು. ಇದೀಗ ಮೃತದೇಹ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿದ್ದು, ಶನಿವಾರ ಬೆಳಗ್ಗೆ 9.ಕ್ಕೆ ಮೃತದೇಹವನ್ನು ತರಲಾಗುವುದು. ಮೊದಲಿಗೆ ಹೊಸಂಗಡಿ ಬಳಿಯ ವಾಮಂಜೂರು ಶಾಲೆಯಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಲಾಗುವುದು. ಬಳಿಕ ಮನೆಗೆ ಸಾಗಿಸಿ, ನಂತರ ಹೊಸಂಗಡಿ ಬಳಿಯ ರಾಮತ್ತಮಜಾಲ್ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮನೆಯವರು ಮಾಹಿತಿ ನೀಡಿದ್ದಾರೆ. ಮೃತರ ನಿಧನಕ್ಕೆ ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ. ಆರ್. ಜಯಾನಂದ, ಶಾಶಕರಾದ ಸಿ. ಎಚ್ ಕುಞಂಬು, ಎ.ಕೆ.ಎಂ ಅಶ್ರಫ್, ಕನ್ನಡ ಸಾಹಿತ್ಯ ಪರಿಷತ್ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಜಾರ್ಜ್ ಕ್ರಾಸ್ತ, ವಿವಿಧ ಸಂಘಟನೆಗಳ ಪಧಾಧಿಕಾರಿಗಳಾದ ಶ್ಯಾಮ್ ಭಟ್ ಪೈವಳಿಕೆ, ಅರವಿಂದಾಕ್ಷ ಭಂಡಾರಿ ದಡ್ಡoಗಡಿ, ಸುಖೇಶ್, ರವೀಂದ್ರ ಎನ್, ರಾಮಕೃಷ್ಣ ಕಡಂಬಾರ್, ಮಧು ಮಾಸ್ತರ್, ವಿಜಯ ಸಿ. ಎಚ್, ಸಿರಾಜುದ್ದೀನ್, ಇಸ್ಮಾಯಿಲ್, ಶಿವರಾಮ ಭಟ್ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.




-DINESH%20V..jpg)
