ಕಾಸರಗೋಡು: ಪಾಡಿ ಶ್ರೀ ಪುಳ್ಳಿಕರಿಂಗಾಳಿ ಭಗವತೀ ಕ್ಷೇತ್ರ ವ್ಯಾಪ್ತಿಯ ಬಾರಿಕ್ಕಾಡು ಪ್ರಾದೇಶಿಕ ಸಮಿತಿಯಲ್ಲಿರುವ ಬಾರಿಕ್ಕಾಡು ಪುದಿಯಪೆÇರ ಶ್ರೀ ವಿಷ್ಣುಮೂರ್ತಿ ವಯನಾಟ್ಟು ಕುಲವನ್ ತರವಾಡಿನಲ್ಲಿ ಶ್ರೀ ವಯನಾಟ್ಟು ಕುಲವನ್ ತೆಯ್ಯಂಕಟ್ಟು ಮಹೋತ್ಸವವು 2026 ರಲ್ಲಿ ನಡೆಯಲಿದೆ. ಮಹೋತ್ಸವಕ್ಕಾಗಿ ಅಗತ್ಯವಿರುವ ಭತ್ತ ಬೆಳೆಯುವ ನಿಟ್ಟಿನಲ್ಲಿ ಭತ್ತದ ಬಿತ್ತನೆ ಕಾರ್ಯ ಬಾರಿಕ್ಕಾಡಿನಲ್ಲಿ ಜರುಗಿತು.
ತರವಾಡು ಸದಸ್ಯ ಕೃಷ್ಣನ್ ಉದಯಗಿರಿ (ಪಳ್ಳತ್ತಡ್ಕ) ಅವರ ಪ್ರಾರ್ಥನೆಯೊಂದಿಗೆ ಬಿತ್ತನೆ ಕಾರ್ಯ ಆರಂಭಿಸಲಾಯಿತು. ಶ್ರೀ ವಯನಾಟ್ಟು ಕುಲವನ್ ತೆಯ್ಯಂಕಟ್ಟು ಮಹೋತ್ಸವದ ಅಗತ್ಯಕ್ಕಾಗಿ ಸಾವಯವ ಭತ್ತದ ಬೆಳೆ ನಡೆಸಲು ತೀರ್ಮಾನಿಸಲಾಗಿದೆ. ತರವಾಡಿನಲ್ಲಿ ನಡೆದ ಪ್ರಾರ್ಥನೆಯ ನಂತರ ಬಾರಿಕ್ಕಾಡಿನ ವಿಶಾಲ ಬಯಲಿನಲ್ಲಿ ಬಿತ್ತನೆ ನಡೆಯಿತು. ಪಾಡಿ ಶ್ರೀ ಪುಳ್ಳಿಕರಿಂಕಾಳಿ ಭಗವತಿ ಕ್ಷೇತ್ರದ ಆಚಾರ ಸ್ಥಾನಿಕರು, ಆಡಳಿತ ಸಮಿತಿ ಪದಾಧಿಕಾರಿಗಳು, ಬಾರಿಕ್ಕಾಡು ಪ್ರಾದೇಶಿಕ ಸಮಿತಿ ಪದಾಧಿಕಾರಿಗಳು,
ಬಾರಿಕ್ಕಾಡು ಶ್ರೀ ಪುದಿಯಪೆÇರ ತರವಾಡು ಸಮಿತಿ ಸದಸ್ಯರು, ಭಕ್ತಜನರು ಭಾಗವಹಿಸಿದ್ದರು.





