ಕಾಸರಗೋಡು: ಕೃಷಿ ವಿಜ್ಞಾನ ಕೇಂದ್ರ, ಸಿಪಿಸಿಆರ್‍ಐ ಮತ್ತು ಕೃಷಿ ಅಭಿವೃದ್ಧಿ ಹಾಗೂ ರೈತ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ, ಕಾಸರಗೋಡು ಜಿಲ್ಲೆಯ ಎಲ್ಲಾ 38 ಗ್ರಾಮ ಪಂಚಾಯತ್‍ಗಳಲ್ಲಿ ಮೇ 29 ರಿಂದ ಜೂನ್ 12 ರವರೆಗೆ ಆಯೋಜಿಸಿರುವ ವಿಕಾಸ್ ಕೃಷಿ ಸಂಕಲ್ಪ ಅಭಿಯಾನದ ಸಮಾರೋಪ ಸಮಾರಂಭ ಕೋಡೋಂ ಉದಯಪುರಂನಲ್ಲಿರುವ ಗ್ರಾಮಲಕ್ಷ್ಮಿ ಎಫ್‍ಪಿಒ ಸಭಾಂಗಣದಲ್ಲಿ ಜರುಗಿತು. ಕೋಡೋಂಬೇಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಿ ದಾಮೋದರನ್ ಉದ್ಘಾಟಿಸಿದರು. ಗ್ರಾಮಲಕ್ಷ್ಮಿ ಎಫ್‍ಪಿಒ ಎಂ.ಡಿ ಜೋಸೆಫ್ ಇ.ಜೆ ಅಧ್ಯಕ್ಷತೆ ವಹಿಸಿದ್ದರು.
ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಪಿ.ವಿ. ಶ್ರೀಲತಾ, ಗ್ರಾಮ ಪಂಚಾಯಿತಿ ಸದಸ್ಯ ಕುಞÂಕೃಷ್ಣನ್, ಕಾಸರಗೋಡು ಕೃಷಿ ಉಪ ನಿರ್ದೇಶಕಿ ಅನಿಲಾ ಮ್ಯಾಥ್ಯೂ, ಬೇಲೂರ್ ಕೃಷಿ ಅದಿಕಾರಿ ಹರಿತಾ ಕೆ.ವಿ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭ ಸಿಪಿಸಿಆರ್‍ಐ ನಿರ್ದೇಶಕ ಡಾ. ಕೆ.ಬಿ. ಹೆಬ್ಬಾರ್, ಕ್ರಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಮನೋಜ್‍ಕುಮಾರ್ ಟಿ.ಎಸ್, ಸಿಐಎಫ್‍ಟಿ ಕೊಚ್ಚಿಯ ಡಾ. ನೀತು ಕೆ.ಸಿ, ಕಾಸರಗೋಡು ಕ್ರಷಿ ವಿಜ್ಞಾನ ಕೇಂದ್ರದ ಎಸ್‍ಎಂಎಸ್ ಡಾ. ಬೆಂಜಮಿನ್ ಮ್ಯಾಥ್ಯೂ ರೈತ ವಿಜ್ಞಾನ ಮುಖಾಮುಖಿಯಲ್ಲಿ ಭಾಗವಹಿಸಿದರು. ಕೃಷಿಗೆ ಸಂಬಂಧಿಸಿದ ಪ್ರಮುಖ ಸಮಸ್ಯೆಗಳು ಮತ್ತು ಶಿಫಾರಸುಗಳನ್ನು ಸಂಕ್ಷೇಪಿಸಿ ರಾಷ್ಟ್ರೀಯ ಕೃಷಿ ಸಂಶೋಧನಾ ಮಂಡಳಿಗೆ ವರದಿಯನ್ನು ಸಲ್ಲಿಸಲಾಯಿತು. ಕಾಸರಗೋಡು ಕೃಷಿವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಮನೋಜ್ ಕುಮಾರ್ ಟಿ.ಎಸ್ ಸ್ವಾಗತಿಸಿ ಯೋಜನೆಯನ್ನು ವಿವರಿಸಿದರು.ಗ್ರಾಮಲಕ್ಷ್ಮಿ ಎಫ್‍ಪಿಒ ನಿರ್ದೇಶಕ ಟಾಮ್ ಮ್ಯಾಥ್ಯೂ ವಂದಿಸಿದರು.
ರೈತರಿಗೆ ಹೊಸ ತಂತ್ರಜ್ಞಾನಗಳನ್ನು ನೇರವಾಗಿ ತಲುಪಿಸುವುದು ಮತ್ತು ರೈತರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದಕ್ಕೆ ಅನುಗುಣವಾಗಿ ರಾಷ್ಟ್ರೀಯ ಕೃಷಿ ಸಂಶೋಧನಾ ಮಂಡಳಿಯ ಸಂಶೋಧನಾ ಯೋಜನೆಗಳನ್ನು ರಚಿಸುವ ಉದ್ದೇಶದೊಂದಿಗೆ ಕೃಷಿ ಸಂಕಲ್ಪ ಅಭಿಯಾನ ಆಯೋಜಿಸಲಾಗಿತ್ತು. ರೈತರ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶದಿಂದ ವಿಜ್ಞಾನಿಗಳು ರೈತರೊಂದಿಗೆ ನೇರವಾಗಿ ಸಂವಹನ ನಡೆಸಿದರು. ರಾಷ್ಟ್ರವ್ಯಾಪಿ ಅಭಿಯಾನವನ್ನು ರಾಷ್ಟ್ರೀಯ ಕೃಷಿ ಸಂಶೋಧನಾ ಮಂಡಳಿಯ ಅಡಿಯಲ್ಲಿ 113 ಸಂಶೋಧನಾ ಸಂಸ್ಥೆಗಳು, 731 ಕೃಷಿ ವಿಜ್ಞಾನ ಕೇಂದ್ರಗಳು, ಕೇಂದ್ರ ಮತ್ತು ರಾಜ್ಯ ಕೃಷಿ ಮೂಲಕ ನಡೆಸಲಾಗಿತ್ತು.





