ನವದೆಹಲಿ: ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಚಿತ್ರ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.
'ಈ ಚಿತ್ರವನ್ನು ಸಿಬಿಎಫ್‌ಸಿ ಪ್ರಮಾಣೀಕರಿಸಿದೆ. ಆದರೆ, ಕೆಲ ಸಂಘಟನೆಗಳು ಹಿಂಸಾಚಾರದ ಬೆದರಿಕೆ ಒಡ್ಡಿವೆ. ಈ ಕಾರಣಕ್ಕೆ ಚಿತ್ರ ಪ್ರದರ್ಶನದ ಮೇಲೆ ವಸ್ತುತಃ ನಿಷೇಧ ಹೇರಿದಂತಾಗಿದೆ' ಎಂದು ಆರೋಪಿಸಿ ಬೆಂಗಳೂರಿನ ಎಂ.ಮಹೇಶ ರೆಡ್ಡಿ ಪಿಐಎಲ್ ಸಲ್ಲಿಸಿದ್ದಾರೆ.
'ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡದಿರುವುದು ಸಂವಿಧಾನದ 14, 19(1)(ಎ), 19(1)(ಜಿ) ಹಾಗೂ 21ನೇ ವಿಧಿಗಳ ಉಲ್ಲಂಘನೆ' ಎಂದು ಅರ್ಜಿಯಲ್ಲಿ ಹೇಳಲಾಗಿದೆ.

