HEALTH TIPS

Russia Ukraine War | ರಷ್ಯಾದಿಂದ ಸತತ ಡ್ರೋನ್‌ ದಾಳಿ, 3 ಸಾವು

ಕೀವ್: ರಾಜಧಾನಿ ಕೀವ್ ಸೇರಿ ಉಕ್ರೇನ್‌ನ ಎರಡು ನಗರಗಳ ಮೇಲೆ ರಷ್ಯಾ ಸೇನೆ ಮಂಗಳವಾರ ಸತತ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದು, ಮೂವರು ಮೃತಪಟ್ಟಿದ್ದಾರೆ.

ಸುಮಾರು 315 ಡ್ರೋನ್‌ಗಳು ಮತ್ತು ಏಳು ಕ್ಷಿಪಣಿಗಳನ್ನು ಈ ಎರಡು ನಗರಗಳನ್ನು ಗುರಿಯಾಗಿಸಿ ರಷ್ಯಾದ ಸೇನೆ ಪ್ರಯೋಗಿಸಿದೆ. ದಾಳಿಯಲ್ಲಿ ಇತರೆ 13 ಮಂದಿ ಗಾಯಗೊಂಡಿದ್ದಾರೆ.

'ಯುದ್ಧದ ಈ ಮೂರು ವರ್ಷಗಳ ಅವಧಿಯಲ್ಲಿಯೇ ಇದು ಅತಿ ದೊಡ್ಡ ದಾಳಿಯಾಗಿದೆ' ಎಂದು ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿಕೆ ನೀಡಿದ್ದಾರೆ.

'ಶಾಂತಿ ಸ್ಥಾಪನೆ ಕುರಿತು ಅಮೆರಿಕ ಮತ್ತು ಇತರೆ ರಾಷ್ಟ್ರಗಳ ಧ್ವನಿಯನ್ನೂ ಅಡಗಿಸುವಂತೆ ರಷ್ಯಾವು ಡ್ರೋನ್‌ ದಾಳಿ ನಡೆಸಿದೆ. ಅಮೆರಿಕ ಮತ್ತು ಯೂರೋಪ್‌ನಿಂದ ಈ ದಾಳಿಗೆ ಪ್ರತಿಯಾಗಿ 'ಸ್ಪಷ್ಟ ಪ್ರತಿಕ್ರಿಯೆ' ಬೇಕಾಗಿದೆ' ಎಂದು ಝೆಲೆನ್‌ಸ್ಕಿ ಪ್ರತಿಕ್ರಿಯಿಸಿದ್ದಾರೆ.

'ಒಡೆಸಾ ನಗರದಲ್ಲಿ ಹೆರಿಗೆ ಆಸ್ಪತ್ರೆ, ವಸತಿ ಸಂಕೀರ್ಣವನ್ನು ಗುರಿಯಾಗಿಸಿ ದಾಳಿ ನಡೆದಿದೆ' ಎಂದು ವಲಯ ಮುಖ್ಯಸ್ಥ ಒಲೆಹ್‌ ಕಿಪೆರ್ ಹೇಳಿದ್ದಾರೆ.

ಉಳಿದಂತೆ ರಾಜಧಾನಿ ಕೀವ್‌ನಲ್ಲಿ ಡ್ರೋನ್ ದಾಳಿಯಿಂದ ನಾಲ್ವರು ಗಾಯಗೊಂಡರು. ವಸತಿ ಸಂಕೀರ್ಣಗಳಿಗೆ ಹಾನಿಯಾಗಿದೆ ಎಂದು ಮೇಯರ್ ವಿಟಲಿ ಲಿಟ್‌ಸ್‌ಚ್ಕೊ ತಿಳಿಸಿದರು.

ರಷ್ಯಾದ ಸೇನಾ ನೆಲೆ ಮೇಲೆ ಜೂನ್ 1ರಂದು ಉಕ್ರೇನ್‌ ನಡೆಸಿದ್ದ ದಾಳಿಗೆ ಪ್ರತಿಯಾಗಿ ಈಗ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಕ್ರೇನ್‌ ಸೇನೆಯು ಈ ಡ್ರೋನ್‌ಗಳನ್ನು ತಡೆದುರುಳಿಸುವ ಯತ್ನ ನಡೆಸಿವೆ. ದಾಳಿ ನಂತರ ಆಗಸದಲ್ಲಿ ದಟ್ಟ ಹೊಗೆ ಆವರಿಸಿತ್ತು. ದಾಳಿ ಸಂದರ್ಭದಲ್ಲಿ ಹೆಚ್ಚಿನ ನಾಗರಿಕರು ಮೆಟ್ರೊ ನಿಲ್ದಾಣಗಳಲ್ಲಿ ಆಶ್ರಯ ಪಡೆದಿದ್ದರು ಎಂದು ವರದಿ ಉಲ್ಲೇಖಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries