ಅಮರಾವತಿ: ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಆಂಧ್ರ ಪ್ರದೇಶದಲ್ಲಿ ಇಂದು (ಶನಿವಾರ) ಆಯೋಜನೆಗೊಂಡಿರುವ ಬೃಹತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದಾರೆ.
ಬಂದರು ನಗರಿ ವಿಶಾಖಪಟ್ಟಣದ ಆರ್‌ಕೆ ಬೀಚ್‌ನಿಂದ ಭೋಗಪುರಂವರೆಗೆ 26 ಕಿ.ಮೀ.ಉದ್ದದ ಕಾರಿಡಾರ್‌ನಲ್ಲಿ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಡೆಯುತ್ತಿದೆ.
ಮೋದಿಗೆ ಆಂಧ್ರ ಸಿಎಂ, ಡಿಸಿಎಂ ಸಾಥ್
ವಿಶಾಖಪಟ್ಟಣದ ಆರ್‌ಕೆ ಬೀಚ್‌ನ್ ಕಾರಿಡಾರ್‌ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಎ. ಚಂದ್ರಬಾಬು ನಾಯ್ಡು ಮತ್ತು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಸಾಥ್ ನೀಡಿದ್ದಾರೆ.
ಗಿನ್ನೆಸ್ ದಾಖಲೆ
'ಬುಡಕಟ್ಟು ಸಮುದಾಯಕ್ಕೆ ಸೇರಿದ 22,122 ವಿದ್ಯಾರ್ಥಿಗಳು ಏಕಕಾಲದಲ್ಲಿ 108 ನಿಮಿಷ ಸೂರ್ಯ ನಮಸ್ಕಾರ ಮಾಡುವ ಮೂಲಕ ಗಿನ್ನೆಸ್ ದಾಖಲೆ ಬರೆದಿದ್ದಾರೆ ಎಂದು ಘೋಷಿಸಲು ನಮಗೆ ಹೆಮ್ಮೆಯಾಗುತ್ತದೆ' ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ದೇಶದ ಜನತೆಗೆ ಮೋದಿ ಶುಭಾಶಯ
11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಪ್ರಧಾನಿ ಮೋದಿ ಅವರು ದೇಶದ ಜನರಿಗೆ ಶುಭಾಶಯ ಕೋರಿದ್ದಾರೆ.
ಯೋಗ ಜನರ ಜೀವನದ ಭಾಗವಾಗಿದೆ: ಮೋದಿ
11 ವರ್ಷಗಳ ನಂತರ ಯೋಗ ಪ್ರಪಂಚದಾದ್ಯಂತದ ಕೋಟ್ಯಂತರ ಜನರ ಜೀವನದ ಭಾಗವಾಗಿದೆ ಎಂದು ಪ್ರಧಾನಿ ಮೋದಿ ಹೇಳುತ್ತಾರೆ.
175 ದೇಶಗಳ ಒಪ್ಪಿಗೆ
ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸುವ ಭಾರತದ ಪ್ರಸ್ತಾಪವನ್ನು ಅತಿ ಕಡಿಮೆ ಸಮಯದಲ್ಲಿ 175 ದೇಶಗಳು ಒಪ್ಪಿಕೊಂಡಿವೆ ಎಂದು ಮೋದಿ ತಿಳಿಸಿದ್ದಾರೆ.
ಯೋಗದಿಂದ ಎಲ್ಲರಿಗೂ ಸಂದೇಶ
ಸಿಡ್ನಿಯ ಒಪೇರಾ ಹೌಸ್ ಆಗಿರಲಿ ಅಥವಾ ಎವರೆಸ್ಟ್ ಪರ್ವತವಾಗಲಿ, ಸಾಗರದ ಪ್ರದೇಶವಾಗಲಿ ಯೋಗವು ಎಲ್ಲರಿಗೂ ಸಂದೇಶವಾಗಿದೆ ಎಂದು ಮೋದಿ ತಿಳಿಸಿದ್ದಾರೆ.
ಯೋಗ ಎಲ್ಲರಿಗೂ ಅತ್ಯಗತ್ಯ: ಮೋದಿ
ಯೋಗ ಗಡಿಗಳು, ವಯಸ್ಸು, ಸಾಮರ್ಥ್ಯವನ್ನು ಮೀರಿ ಎಲ್ಲರಿಗೂ ಅತ್ಯಗತ್ಯವಾಗಿದೆಎಂದು ಮೋದಿ ಹೇಳಿದ್ದಾರೆ.
'ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ'
'ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ' ಎಂಬುದು ಈ ವರ್ಷದ ಅಂತರರಾಷ್ಟ್ರೀಯ ಯೋಗ ದಿನದ ಘೋಷವಾಕ್ಯವಾಗಿದೆ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ.
ಯೋಗ ಎಂದರೆ ಎಲ್ಲರೂ ಒಂದಾಗುವುದು ಎಂದರ್ಧ: ಮೋದಿ
ಯೋಗ ಇಂದು ವಿಶ್ವವನ್ನೇ ಒಂದು ಮಾಡಿದೆ: ಮೋದಿ
ಯೋಗ ಹಲವು ದೇಶಗಳ ಜತೆ ಬಾಂಧವ್ಯ ವೃದ್ಧಿಗೆ ನೆರವಾಗಿದೆ: ಮೋದಿ
ವಿಶ್ವ ಯೋಗ ದಿನ ಆಚರಿಸುತ್ತಿರುವುದು ಸಾಮಾನ್ಯವಲ್ಲ: ಮೋದಿ
ಯೋಗ ಇಂದು ಪ್ರತಿಯೊಬ್ಬರ ಜೀವನದ ಭಾಗವಾಗಿದೆ: ಮೋದಿ
ಪ್ರತಿಯೊಬ್ಬರೂ ಯೋಗಾಸನ ಮಾಡಬೇಕು: ಮೋದಿ ಕರೆ
ಮಾನಸಿಕ, ದೈಹಿಕ ಆರೋಗ್ಯ ಕಾಪಾಡಲು ಯೋಗ ನೆರವು: ಮೋದಿ
ಯೋಗ ವಿಶ್ವದಾದ್ಯಂತ್ಯ ಕೋಟ್ಯಂತರ ಜನರ ಜೀವನಶೈಲಿಯನ್ನು ಬದಲಾಯಿಸಿದೆ: ಮೋದಿ
ಅಮೆರಿಕದಲ್ಲಿ ಯೋಗಾಸನ...
ಅಮೆರಿಕದ ನ್ಯೂರ್ಯಾಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ನೂರಾರು ಜನ ಯೋಗಪಟುಗಳು ಪ್ರದರ್ಶನ ನೀಡಿದರು. ಈ ವೇಳೆ ಭಾರತೀಯ ಹೈಕಮಿಷನ್ ಅಧಿಕಾರಿಗಳು ಹಾಜರಿದ್ದರು.
ಲಂಡನ್‌ನಲ್ಲಿ ಯೋಗಾಸನ...
ಲಂಡನ್‌ನಲ್ಲಿ ನಡೆದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾರತದ ಹೈ ಕಮಿಷನರ್ ವಿಕ್ರಮ್ ದೊರೈಸ್ವಾಮಿ ಅವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನೂರಾರು ಜನ ಯೋಗಪಟುಗಳು ಭಾಗವಹಿಸಿದ್ದರು.




