ಕಾಸರಗೋಡು: ನಗರದ ಅಡ್ಕತ್ತಬೈಲಿನಲ್ಲಿ ನಗರಠಾಣೆ ಎಸ್.ಐ ಅನ್ಸಾರ್ ನೇತೃತ್ವದ ಪೊಲೀಸರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ವಾಹನದಲ್ಲಿ ಸಾಗಿಸುತ್ತಿದ್ದ 1440ಲೀ. ಸ್ಪಿರಿಟ್ ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ. ಕಾಸರಗೋಡು ನೆಲ್ಲಿಕುಂಜೆ ನಿವಾಸಿ ಪ್ರಣವ್ ಶೆಣೈ, ಅಡ್ಕತ್ತಬೈಲು ತಾಳಿಪಡ್ಪು ನಿವಾಸಿ ಅನೂಷ್, ಕಾಞÂರಪಳ್ಳಿ ನಿವಾಸಿ ವಿ.ಸಿ ಥಾಮಸ್ ಬಂಧಿತರು.
ತಲಾ 35ಲೀ.ನ 47ಕ್ಯಾನುಗಳಲ್ಲಿ ತುಂಬಿಡಲಾಗಿದ್ದ ಸ್ಪಿರಿಟ್ ವಶಪಡಿಸಿಕೊಳ್ಳಲಾಗಿದೆ. ಈವೆಂಟ್ ಮ್ಯಾನೇಜ್‍ಮೆಂಟ್ ಸಂಬಂಧಿಸಿದ ವಾಹನದಲ್ಲಿ ಕ್ಯಾನುಗಳಲ್ಲಿ ನೀರು ಸಾಗಿಸುತ್ತಿರುವ ನೆಪದಲ್ಲಿ ಸ್ಪಿರಿಟ್ ಸಾಗಾಟ ನಡೆಸುತ್ತಿರುವುದನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದರು.


