ಕಾಸರಗೋಡು: ಎಸ್ಸೆಸೆಫ್‍ನ ಈ ವರ್ಷದ ಕಾಸರಗೋಡು ಜಿಲ್ಲಾ ಸಾಹಿತ್ಯೋತ್ಸವ ಬದಿಯಡ್ಕದಲ್ಲಿ ಆರಂಭಗೊಂಡಿತು. ಸಾಂಸ್ಕøತಿಕ ಸಮ್ಮೇಳನದ ಪೂರ್ವಭಾವಿಯಾಗಿ ಬದಿಯಡ್ಕ ಪೇಟೆಯಲ್ಲಿ ಸಾಂಸ್ಕøತಿಕ ಮೆರವಣಿಗೆ ನಡೆಯಿತು.
ಜುಲೈ 20 ರಿಂದ 23ರ ವರೆಗೆ ವಿವಿಧ ಚರ್ಚೆಗಳು ನಡೆಯಲಿದೆ. ಜುಲೈ 26ರಂದು ಸಂಜೆ ನಡೆಯುವ ಸಾಂಸ್ಕೃತಿಕ ಸಮಾರಂಭವನ್ನು ಖ್ಯಾತ ಕಾದಂಬರಿಕಾರ ಅಂಬಿಕಾ ಸುತನ್ ಮಾಙËಡ್ ಉದ್ಘಾಟಿಸುವರು. ಎಸ್.ಎಸ್.ಎಫ್ ರಾಷ್ಟ್ರೀಯ ಕಾರ್ಯದರ್ಶಿ ಫಿರ್ದೌಸ್ ಸಖಾಫಿ ವಿಷಯ ಮಂಡಿಸುವರು. ಎಸ್.ಎಸ್.ಎಫ್ ಜಿಲ್ಲಾಧ್ಯಕ್ಷ ರಯೀಸ್ ಮುಯಿನಿ ಅಧ್ಯಕ್ಷತೆ ವಹಿಸುವರು. ಸಾಹಿತ್ಯೋತ್ಸವದ ಅಂಗವಾಗಿ, ಕಾಸರಗೋಡು ಜಿಲ್ಲೆ ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಲಿರುವುದು.
ಜುಲೈ 24 ರಂದು ಜಿಲ್ಲೆಯ 32 ಪ್ರಮುಖ ನೇತಾರರು ಸಂಗಮಕ್ಕೆ ಧ್ವಜಾರೋಹಣ ನಡೆಸುವರು. ನಂತರ ನಡೆಯುವ ಸಾಂಘಿಕ ಸಮ್ಮೇಳನದಲ್ಲಿ ಬಿ.ಎಸ್. ಅಬ್ದುಲ್ಲಕುಞÂ ಫೈಸಿ, ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿ, ಸುಲೈಮಾನ್ ಕರಿವೆಳ್ಳೂರ್, ಬಶೀರ್ ಪುಳಿಕ್ಕೂರ್, ಮೂಸಾ ಸಖಾಫಿ ಕಳತ್ತೂರ್, ಸಿ.ಎನ್. ಜಾಫರ್, ಸಾದಿಕ್ ಪಾಲ್ಗೊಳ್ಳುವರು.
ಜುಲೈ 25 ರಂದು ನಡೆಯುವ ಸಾಂಸ್ಕೃತಿಕ ಸಮ್ಮೇಳನದಲ್ಲಿ ಶಾಸಕರಾದ ಎ.ಕೆ.ಎಂ. ಅಶ್ರಫ್, ಎನ್.ಎ. ನೆಲ್ಲಿಕುನ್ನು, ಸಿ.ಎಚ್. ಕುಂಞಂಬು, ಇ. ಚಂದ್ರಶೇಖರನ್, ಎಂ. ರಾಜಗೋಪಾಲನ್, ಜಿಪಂ ಉಪಾಧ್ಯಕ್ಷ ಶಾನವಾಸ್ ಪಾದೂರ್ ಭಾಗವಹಿಸಲಿದ್ದಾರೆ. ಎಸ್ಸೆಸೆಫ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಯೂಸುಫ್ ಸಖಾಫಿ ಮುತ್ತೇಡಂ ವಿಷಯ ಮಂಡಿಸಲಿದ್ದಾರೆ. ವಿವಿಧ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಜುಲೈ 27 ರಂದು ನಡೆಯುವ ಸಮಾರೋಪ ಸಮಾರಂಭವನ್ನು ಸಮಸ್ತ ಉಪಾಧ್ಯಕ್ಷ ಸಯ್ಯಿದ್ ಆಟ್ಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸುವರು. ಎಸ್.ಎಸ್.ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಅಬೂಬಕರ್ ವಿಷಯ ಮಂಡಿಸುವರು.
ಸಾಹಿತ್ಯೋತ್ಸವದ ವಿವಿಧ ಅಧಿವೇಶನಗಳಲ್ಲಿ ಖ್ಯಾತ ಬರಹಗಾರ ಪಿ.ವಿ. ಶಾಜಿಕುಮಾರ್, ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ರಾಜೇಂದ್ರ ಪಿಲಾಂಗಟ್ಟೆ, ಡಾ. ಶಮೀಮ್ ಕಟ್ಟತ್ತಡ್ಕ, ಉಣ್ಣಿಕೃಷ್ಣನ್ ಪುರಚ್ಚೇರಿ, ಅಹ್ಮದ್ ಶೆರಿನ್, ಅಬ್ದುಲ್ ರಹಮಾನ್ ಎರೋಲ್, ಫೈಝಲ್ ಅಹ್ಸನಿ ಉಳಿಯಿಲ್, ಅಲ್ತಾಫ್ ಪದಿನಾರುಂಗಲ್, ಸುರಾಬ್ ಮುಂತಾದವರು ಭಾಗವಹಿಸಲಿದ್ದಾರೆ.




