ಕಾಸರಗೋಡು: ಸಾಮಾಜಿಕ ಜಾಲ ತಾಣದ ಸುಪ್ರಸಿದ್ಧ ವ್ಲೋಗರ್, ಕಾಸರಗೋಡಿನ ಮಲಯಾಳದಲ್ಲಿ ಮಾತಾಡುವ ಮೂಲಕ ಕ್ಯಾತಿಗಳಿಸಿದ್ದ "ಶಾಲು ಕಿಂಗ್ " ಖ್ಯಾತಿಯ ಕುಂಬಳೆ ಠಾಣಾ ವ್ಯಾಪ್ತಿಯ ಕೊಡಿಯಮ್ಮೆ, ಚೇಪಿನಡ್ಕಂ ನಿವಾಸಿ ಮುಹಮ್ಮದ್ ಸಾಲಿ ಯಾನೆ ಶಾಲು (35)ಎಂಬಾತನನ್ನು ಲೈಂಗಿಕ ದೌರ್ಜನ್ಯ ಕೇಸಿನಲ್ಲಿ ಪೆÇೀಲೀಸರು ಬಂಧಿಸಿದ್ದಾರೆ.
ವಿದೇಶದಿಂದ ಊರಿಗೆ ವಾಪಸಾಗುವ ಮಧ್ಯೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೋಯಿಕ್ಕೋಡಿನ ಕೊಯಿಲಾಂಡಿ ಠಾಣೆ ಪೆÇೀಲೀಸರು ಬಂಧಿಸಿದ್ದರು.
ಶಾಲು ಕಿಂಗ್ ಮೀಡಿಯ, ಶಾಲು ಕಿಂಗ್ ವ್ಲೋಗ್ಸ್, ಶಾಲು ಕಿಂಗ್ ಫ್ಯಾಮಿಲಿ ಮುಂತಾದ ಹೆಸರಲ್ಲಿ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಜಾಲಾತಾಣಗಳಲ್ಲಿ ಸಕ್ರಿಯನಾಗಿದ್ದ ಈತ ಈ ಮೂಲಕ ಪ್ರಸಿದ್ಧಿಪಡೆದು, ಅಪಾರ ವೀಕ್ಷಕರನ್ನು ಹೊಂದಿದ್ದನು.
2016ರಲ್ಲಿ ಮೊದಲ ವಿವಾಹ ನಡೆಸಿದ ಈತನಿಗೆ ಈ ಸಂಬಂಂಧದಲ್ಲಿ ಮೂವರು ಮಕ್ಕಳಿದ್ದಾರೆ. ನಂತರ ಮೊದಲ ಪತ್ನಿಯೊಂದಿಗೆ ವಿರಸದಿಂದ ಬೇರೆಯಾಗಿ ವಾಸಿಸುತ್ತಿದ್ದನು. ಕೋಯಿಕ್ಕೋಡ್ ಜಿಲ್ಲೆಯ 15ರ ಬಾಲಕಿಯೊಂದಿಗೆ ಜಾಲತಾಣ ಮಾಧ್ಯಮ ಮೂಲಕ ಸ್ನೇಹಬೆಳೆಸಿದ್ದ ಈತ, ಆಕೆಗೆ ವಿವಾಹದ ಭರವಸೆ ನೀಡಿ ಸ್ನೇಹ ಬೆಳೆಸಿ, ನಿರಂತರ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಬಾಲಕಿ ದೂರು ನೀಡಿದ್ದಳು. ಈ ಪ್ರಕರಣದಲ್ಲಿ ಕೇಸು ದಾಖಲಾಗುತ್ತಿದ್ದಂತೆಯೇ ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದನು.
ನಂತರ ಈತನ ಪತ್ತೆಗಾಗಿ ಕೊಯಿಲಾಂಡಿ ಠಾಣೆ ಪೆÇೀಲೀಸರು ಲುಕ್ ಔಟ್ ನೋಟೀಸ್ ಜಾರಿಗೊಳಿಸಿದ್ದರು ಶನಿವಾರ ವಿದೇಶದಿಂದ ಊರಿಗೆ ವಾಪಸಾಗುವ ಬಗ್ಗೆ ಖಚಿತ ಮಾಹಿತಿ ಪಡೆದ ಪೆÇೀಲೀಸರು ಈ ಕಾರ್ಯಾಚರಣೆ ನಡೆಸಿದ್ದರು.





