ಕಾಸರಗೋಡು: ಉದ್ಯೋಗ ವಿನಿಮಯ ಕೇಂದ್ರ ಮತ್ತು ಉದ್ಯೋಗಾವಕಾಶ ಕೇಂದ್ರವು ಜುಲೈ 19 ರಂದು ತ್ರಿಕರಿಪುರ ಇ.ಕೆ. ನಾಯನಾರ್ ಸ್ಮಾರಕ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಿದೆ.
ಉದ್ಯೋಗದಾತರಾಗಿರುವ ವಿವಿಧ ಕಂಪನಿಗಳ ನೋಂದಣಿ ಪ್ರಾರಂಭವಾಗಿದ್ದು, ಉತ್ಪಾದನೆ, ಐಟಿ, ಬ್ಯಾಂಕಿಂಗ್, ಆರೋಗ್ಯ ರಕ್ಷಣೆ, ಆತಿಥ್ಯ, ಶಿಕ್ಷಣ, ಲಾಜಿಸ್ಟಿಕ್ಸ್, ಆಟೋಮೊಬೈಲ್, ಚಿಲ್ಲರೆ ವ್ಯಾಪಾರ ಮುಂತಾದ ವಿವಿಧ ವಲಯಗಳಲ್ಲಿನ ಉದ್ಯೋಗದಾತರು ಭಾಗವಹಿಸಲಿದ್ದಾರೆ. 5ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸುವ ಈ ಮೇಳದಲ್ಲಿ ಕಂಪನಿಗಳಿಗೆ ಉತ್ತಮ ಬ್ರ್ಯಾಂಡಿಂಗ್ ಮತ್ತು ಅಭ್ಯರ್ಥಿಗಳೊಂದಿಗೆ ನೈಜ ಸಮಯದಲ್ಲಿ ಭೇಟಿಯಾಗುವ ಅವಕಾಶ ಸಿಗಲಿದೆ. ಭಾಗವಹಿಸಲು ಆಸಕ್ತಿ ಹೊಂದಿರುವ ಕಂಪನಿಗಳು hಣಣಠಿs://ಟiಟಿಞಣಡಿ.ee/ emಠಿಟoಥಿಚಿbiಟiಣಥಿಛಿeಟಿಣಡಿeಞsಜ ವೆಬ್‍ಸೈಟ್‍ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ÀÄ https://linktr.ee/ employabilitycentreksd ಇಮೇಲ್ ಐಡಿಯನ್ನು ಸಂಪರ್ಕಿಸಬಹುದು. ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ ಜುಲೈ 15 ಆಗಿದ್ದು, ಈ ಬಗ್ಗೆ ಮಾಹಿತಿಗಾಗಿ ಮೊಬೈಲ್ ಸಂಖ್ಯೆ(9207155700)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

