ಕಾಸರಗೋಡು: ಮೊಗ್ರಾಲ್ ಪುತ್ತೂರು ಸನಿಹದ ಸಿ.ಪಿ.ಸಿ.ಆರ್.ಐ. ಅತಿಥಿ ಗೃಹದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಮತ್ತು ಪಿಕಪ್ ವಾಹನ ಪರಸ್ಪರ ಡಿಕ್ಕಿಯಾಗಿ ಹಲವರು ಗಾಯಗೊಂಡಿದ್ದಾರೆ. ತಲಪ್ಪಾಡಿಯಿಂದ ಕಾಸರಗೋಡು ಕಡೆಗೆ ಬರುತ್ತಿದ್ದ ಬಸ್ ಮತ್ತು ಕಾಸರಗೋಡಿನಿಂದ ಬರುತ್ತಿದ್ದ ಪಿಕಪ್ ವಾಹನ ನಡುವೆ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ಅಪಘಾತ ನಡೆದಿದೆ.
ಅಪಘಾತದಿಂದ ಪಿಕ್‍ಅಪ್ ವಾಹನ ಮತ್ತು ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಪಿಕಪ್ ಟ್ರಕ್‍ನಲ್ಲಿದ್ದವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ಮತ್ತು ಬಸ್ ಪ್ರಯಾಣಿಕರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಸರಗೋಡು ಪೆÇಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಹಾರ ಕಾರ್ಯಾಚರಣೆ ನಡೆಸಿದರು. ಪಿಕ್‍ಅಪ್ ಚಾಲಕ ಮೊಗ್ರಾಲ್ ಪುತ್ತೂರು ಕುನ್ನಿಲ್ ನಿವಾಸಿ ಇಶಾಮ್, ಇಬ್ಬರು ಸೆಂಟ್ರಿಂಗ್ ಕಾರ್ಮಿಕರು ಹಾಗೂ ಬಸ್ಸಿನಲ್ಲಿದ್ದ ಹತ್ತಕ್ಕೂ ಹೆಚ್ಚು ಮಂದಿ ಗಾಐಗೊಂಡವರಲ್ಲಿ ಒಳಗೊಂಡಿದ್ದಾರೆ. ಗಾಐಆಳುಗಳನ್ನು ಕಾಸರಗೋಡಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.


