ಕಾಸರಗೋಡು: ಸಾಫ್ಟ್ ವೇರ್ ಮೈಗ್ರೇಶನ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಅಂಚೆ ವಿಭಾಗದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಂಚೆ ಕಚೇರಿಗಳು ಜುಲೈ 19 ರಿಂದ ಜುಲೈ 21 ರವರೆಗೆ ತನ್ನ ಚಟುವಟಿಕೆ ಸ್ಥಗಿತಗೊಳಿಸಲಿದೆ.
ಹಣದ ವಹಿವಾಟು ನಡೆಸಲು ಮತ್ತು ರಿಜಿಸ್ಟರ್ಡ್, ಸ್ಪೀಡ್ ಪೋಸ್ಟ್, ಪಾರ್ಸೆಲ್‍ಗಳಂತಹ ಅಂಚೆ ಸೇವೆಗಳ ನಿರ್ವಹಣೆ ಅಸಾಧ್ಯವಾಗಲಿದೆ. ಅಲ್ಲದೆ, ಜುಲೈ 22 ರಿಂದ ಒಂದು ವಾರದವರೆಗೆ ಇಂತಹ ಸೇವೆಗಳಲ್ಲಿ ಕೆಲವು ವ್ಯತ್ಯಯವಾಗುವ ಸಾಧ್ಯತೆಯೂ ಇರಲಿದೆ. ಈ ದಿವಸಗಳಲ್ಲಿ ಸಾರ್ವಜನಿಕರು ಅಂಚೆ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಜಿಲ್ಲಾ ಅಂಚೆ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.





