ಕಾಸರಗೋಡು: ಜೀವ ವೈವಿಧ್ಯ ಸಂರಕ್ಷಣೆ ಕ್ಷೇತ್ರದಲ್ಲಿ ಶ್ಲಾಘನೀಯ ಕೆಲಸಕ್ಕಾಗಿ ರಾಜ್ಯ ಅರಣ್ಯ ಮತ್ತು ವನ್ಯಜೀವಿ ಇಲಾಖೆಯು ವನಮಿತ್ರ ಪ್ರಶಸ್ತಿಯನ್ನು ನೀಡುತ್ತಿದೆ. ಪ್ರಶಸ್ತಿಯು ರೂ. 25000 ಮತ್ತು ಫಲಕವನ್ನು ಒಳಗೊಂಡಿದ್ದು, ಬನ, ಔಷಧೀಯ ಸಸ್ಯಗಳು, ಕೃಷಿ, ಜೀವವೈವಿಧ್ಯಪರಿಸರವನ್ನು ರಕ್ಷಿಸುವ, ಸಂರಕ್ಷಿಸುವ ಚಟುವಟಿಕೆಗಳಿಗಾಗಿ ಪ್ರತಿ ಜಿಲ್ಲೆಯಿಂದ ಒಂದು ಪ್ರಶಸ್ತಿಯನ್ನು ನೀಡಲಾಗುತ್ತದೆ.
ಕಾಸರಗೋಡು ಜಿಲ್ಲೆಯ ಆಸಕ್ತ ವ್ಯಕ್ತಿಗಳು, ಶಿಕ್ಷಣ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು ಮತ್ತು ರೈತರು ಜುಲೈ 31 ರೊಳಗೆ ವಿದ್ಯಾನಗರದಲ್ಲಿರುವ ಸಾಮಾಜಿಕ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಸಬಹುದಾಗಿದೆ. ಅರ್ಜಿಗಳನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಸಾಮಾಜಿಕ ಅರಣ್ಯ ವಿಭಾಗ, ಉದಯಗಿರಿ ಅವರ ಕಚೇರಿಗೆ ಸಲ್ಲಿಸಬೇಕು. ಈ ಹಿಂದೆ ವನಮಿತ್ರ ಪ್ರಶಸ್ತಿ ಪಡೆದವರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅರ್ಜಿ ನಮೂನೆ ಮತ್ತು ಮಾಹಿತಿಗಾಗಿ ಉದಯಗಿರಿಯಲ್ಲಿರುವ ಸಾಮಾಜಿಕ ಅರಣ್ಯ ಇಲಾಖೆ ಕಚೇರಿಯನ್ನು ಅಥವಾ ಕಾಸರಗೋಡು ಮತ್ತು ಹೊಸದುರ್ಗದಲ್ಲಿರುವ ಸಾಮಾಜಿಕ ಅರಣ್ಯ ಇಲಾಖೆ ವ್ಯಾಪ್ತಿಗಳನ್ನು ನೇರವಾಗಿ ಸಂಪರ್ಕಿಸಬಹುದು. ಅರ್ಜಿ ನಮೂನೆಯು ಕೇರಳ ಅರಣ್ಯ ಇಲಾಖೆಯ ವೆಬ್‍ಸೈಟ್ www.forest.kerala.gov.in ನಲ್ಲಿಯೂ ಲಭ್ಯವಿರುವುದಾಗಿ ಪ್ರಕಟಣೆ ತಿಳಿಸಿದೆ.





