ಮುಳ್ಳೇರಿಯ: ಚೆರ್ಕಳ-ಜಾಲ್ಸೂರು ರಸ್ತೆಯ ಮುಳ್ಳೇರಿಯ ಸನಿಹದ ಆಲಂತಡ್ಕದಲ್ಲಿ ಸಂಚರಿಸುತ್ತಿದ್ದ ಆಟೋರಿಕ್ಷಾದ ಮೇಲೆ ಮರ ಬುಡಸಹಿತ ಕಳಚಿಬಿದ್ದ ಪರಿಣಾಮ ಒಬ್ಬರು ಗಾಯಗೊಂಡಿದ್ದಾರೆ. ಆಟೋರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ. ಮುಳ್ಳೇರಿಯಾದಲ್ಲಿ ಹೋಟೆಲ್ ನಡೆಸುತ್ತಿರುವ ಅಬ್ದುಲ್ಲಕುಞÂ ಗಾಯಾಳು. ಇವರನ್ನು ಮುಳ್ಳೇರಿಯಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿ.ಎ ನಗರದ ಮನೆಯಿಂದ ಮುಳ್ಳೇರಿಯಾದ ಅವರ ಹೋಟೆಲ್‍ಗೆ ತಮ್ಮದೇ ರಿಕ್ಷಾದಲ್ಲಿ ಸಂಚರಿಸುತ್ತಿದ್ದಾಗ ದುರಂತ ಸಂಭವಿಸಿದೆ.
ಎರಡು ವರ್ಷದ ಹಿಂದೆ ರಸ್ತೆಅಂಚಿನ ಬೃಹತ್ ಮರ ಉರುಳಿದ ಪರಿಣಾಮ ಸಾಜಿದ್ ಎಂಬವರು ಮೃತಪಟ್ಟಿದ್ದರೆ, ಇನ್ನೊಂದು ಪ್ರಕರಣದಲ್ಲಿ ಸಾಬ್ರು ಎಂಬವರು ಬೆನ್ನುಹುರಿಗೆ ಗಾಯಗಳುಂಟಾಗಿ ಹಾಸಿಗೆ ಹಿಡಿದ ಘಟನೆ ನಡೆದಿದೆ. ಚೆರ್ಕಳ-ಜಾಲ್ಸೂರ್ ರಸ್ತೆಯ ಅಂಚಿಗೆ ಅಪಾಯಕರಿ ಸ್ಥಿತಿಯಲ್ಲಿ ಹಲವಾರು ಮರಗಳಿದ್ದು, ಇವುಗಳನ್ನು ತೆರವುಗೊಳಿಸುವಂತೆ ನಾಗರಿಕರು ಆಗ್ರಹಿಸುತ್ತಿದ್ದಾರೆ.




