HEALTH TIPS

20 ವರ್ಷದ ಇಬ್ಬರು ವಿದ್ಯಾರ್ಥಿಗಳು ತಯಾರಿಸಿದ ಡ್ರೋನ್ ಬಳಸಲಾರಂಭಿಸಿದ ಭಾರತೀಯ ಸೇನೆ

ಹೈದರಾಬಾದ್: ಹೈದರಾಬಾದ್ ಹೊರವಲಯದ ಪಾಲನಿಯಲ್ಲಿರುವ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆಯಂಡ್ ಸೈನ್ಸ್‌ನ (BITS) 20 ವರ್ಷದ ಇಬ್ಬರು ಪದವಿ ವಿದ್ಯಾರ್ಥಿಗಳು ಆವಿಷ್ಕರಿಸಿರುವ ಕಾಮಿಕೇಜ್ ಮಾದರಿಯ ಡ್ರೋನ್‌ಗಳನ್ನು ಭಾರತೀಯ ಸೇನೆ ಬಳಸಲು ಆರಂಭಿಸಿದೆ ಎಂದು ವರದಿಯಾಗಿದೆ.

ಕಾಲೇಜಿನ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ರಾಜಸ್ಥಾನ ಮೂಲದ ಜಯಂತ್ ಖತ್ರಿ ಹಾಗೂ ಕೋಲ್ಕತ್ತ ಮೂಲದ ಶೌರ್ಯ ಚೌಧರಿ ಅವರೇ ಈ ಸಾಧನೆ ಮಾಡಿ ದೇಶದ ಗಮನ ಸೆಳೆದವರು.

ಬಿಡುವಿನ ಅವಧಿಯಲ್ಲಿ ಹಲವು ತಿಂಗಳುಗಳ ಪರಿಶ್ರಮದಿಂದ ಹಾಸ್ಟೆಲ್ ಕೋಣೆಯಲ್ಲಿಯೇ ಈ ಇಬ್ಬರೂ ಕಾಮಿಕೇಜ್ ಮಾದರಿಯ ಕಡಿಮೆ ತೂಕದ ವಿಶೇಷ ಡ್ರೋನ್‌ಗಳನ್ನು ಆವಿಷ್ಕರಿಸಿದ್ದಾರೆ. ಸಂಸ್ಥೆಯ ಮುಖ್ಯಸ್ಥ ಹಾಗೂ ಆದಿತ್ಯ ಬಿರ್ಲಾ ಕಂಪನಿಯ ಕುಮಾರ್ ಮಂಗಳಂ ಬಿರ್ಲಾ ಅವರ ಎದುರು ಈ ಡ್ರೋನ್‌ಗಳನ್ನು ಪ್ರಯೋಗಕ್ಕೆ ಒಳಪಡಿಸಲಾಗಿತ್ತು.

ತಮ್ಮ ಪ್ರಯತ್ನ ಯಶಸ್ವಿಯಾಗಿದ್ದಕ್ಕೆ ಇಬ್ಬರೂ ವಿದ್ಯಾರ್ಥಿಗಳು ರಕ್ಷಣಾ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಅಪೋಲಿಯನ್ ಡೈನಾಮಿಕ್ಸ್ (Apollyon Dynamics) ಎಂಬ ನೂತನ ಸ್ಟಾರ್ಟ್‌ ಅಪ್ ಅನ್ನು ನೋಂದಣಿ ಮಾಡಿಸಿದ್ದರು.

ನಂತರ ಇಬ್ಬರೂ ವಿದ್ಯಾರ್ಥಿಗಳು ತಮ್ಮ ಯಶಸ್ಸಿ ಡ್ರೋನ್‌ಗಳ ಬಗ್ಗೆ ಲಿಂಕ್ಡಿನ್‌ನಲ್ಲಿ ಸೇನಾಧಿಕಾರಿಗಳನ್ನು ಸಂಪರ್ಕಿಸಿದ್ದರು. ಅಧಿಕಾರಿಗಳು ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಕೆಲ ತಿಂಗಳುಗಳ ಹಿಂದೆ ಚಂಡೀಗಢದಲ್ಲಿ ವಿದ್ಯಾರ್ಥಿಗಳು ತಾವು ತಯಾರಿಸಿದ್ದ ಕಾಮಿಕೇಜ್ ಮಾದರಿಯ ಡ್ರೋನ್‌ಗಳ ಸೇನಾಧಿಕಾರಿಗಳ ಮುಂದೆ ಡೆಮೊ ನೀಡಿ ಕಡೆಗೆ ಅವರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು.

ಈ ಡೆಮೊ ಯಶಸ್ವಿಯಾಗಿದ್ದಕ್ಕೆ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್‌ನಲ್ಲಿ ಸೇನಾ ಕಾರ್ಯಾಚರಣೆಗಾಗಿ ಬಳಸಲು ಅಪೋಲಿಯನ್ ಡೈನಾಮಿಕ್ಸ್‌ನಿಂದ ಹಲವು ಕಾಮಿಕೇಜ್ ಡ್ರೋನ್‌ಗಳನ್ನು ಸೇನಾಧಿಕಾರಿಗಳು ತರಿಸಿಕೊಂಡಿದ್ದಾರೆ ಎಂದು ದಿ ಹಿಂದೂ ಪತ್ರಿಕೆಯ ವೆಬ್‌ಸೈಟ್ ವರದಿ ಮಾಡಿದೆ.

ಗಂಟೆಗೆ ಗರಿಷ್ಠ 300 ಕಿ.ಮೀ ವೇಗದಲ್ಲಿ ಹಾಗೂ ರಡಾರ್ ಕಣ್ತಪ್ಪಿಸಿ ಪ್ರತಿಕೂಲ ವಾತಾವರಣದಲ್ಲಿಯೂ ಗುರಿ ಕಡೆಗೆ ಸಾಗುವ ಮಾನವ ರಹಿತ ಡ್ರೋನ್‌ಗಳು ಇವಾಗಿದ್ದು ಗರಿಷ್ಠ 1 ಕೆ.ಜಿಯ ಸ್ಪೋಟಕವನ್ನು ಹೊತ್ತೊಯ್ಯಬಲ್ಲವು.. ಸೇನಾ ಕಾರ್ಯಾಚರಣೆಗೆ ಈ ಡ್ರೋನ್‌ಗಳು ಸಾಕಷ್ಟು ಸಹಾಯವನ್ನು ನೀಡಲಿವೆ. ಇವುಗಳನ್ನು ಆತ್ಮಹತ್ಯಾ ಬಾಂಬರ್ ಡ್ರೋನ್‌ಗಳು (ಕಾಮಿಕೇಜ್ ಡ್ರೋನ್) ಎನ್ನಲಾಗುತ್ತದೆ ಎಂದು ವರದಿ ಹೇಳಿದೆ.

ಇದು ಆರಂಭ ಅಷ್ಟೇ. ಸೇನೆಯ ಕಡೆಯಿಂದ ಇನ್ನೂ ಹೆಚ್ಚಿನ ಆರ್ಡರ್‌ಗಳು ವಿದ್ಯಾರ್ಥಿಗಳು ಸ್ಥಾಪಿಸಿರುವ ಸ್ಟಾರ್ಟ್‌ ಅಪ್‌ಗೆ ಬರಲಿವೆ ಎಂಬುದಾಗಿ ವರದಿ ತಿಳಿಸಿದೆ.

ಇಂಡಿಯನ್ ಆರ್ಮಿಗೆ ಅನುಕೂಲ ಆಗುವ ಕೆಲಸಗಳನ್ನು ಮಾಡಬೇಕು ಎಂದು ಹಠ ತೊಟ್ಟಿದ್ದೆವು. ಅದು ಈಗ ನನಸಾಗಿದೆ. ಈ ನಿಟ್ಟಿನಲ್ಲಿ ಮುಂದುವರೆಯುತ್ತೇವೆ ಎಂದು ವಿದ್ಯಾರ್ಥಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries