HEALTH TIPS

ಕಾವ್ಯ ಸಂಸ್ಕøತಿ ಯಾನ-ಸ್ವಾಗತ ಸಮಿತಿ ರಚನೆ: 27 ರಂದು ದಿನಪೂರ್ತಿ ಕಾವ್ಯ ಸಲ್ಲಾಪ

ಮಂಜೇಶ್ವರ: ಸಾಹಿತ್ಯ ರಚನೆಯಲ್ಲಿ ಶಿಸ್ತು-ಬದ್ಧತೆ ಅಗತ್ಯ. ಮನಸ್ಸನ್ನು ಅರಳಿಸುವ ಬರಹಗಳಿಗೆ ಭವಿಷ್ಯವಿದ್ದು, ಕೆರಳಿಸುವ ಗೆರೆಗಳಿಗೆ ಬದುಕಿಲ್ಲ ಎಂದು ಬೆಂಗಳೂರಿನ ರಂಗಮಂಡಲದ ಸಂಚಾಲಕ, ರಂಗಕರ್ಮಿ ಡಿ.ಬಿ.ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ ಅಭಿಪ್ರಾಯ ವ್ಯಕ್ತಪಡಿಸಿದರು.

ರಂಗಮಂಡಲ ಬೆಂಗಳೂರು ಹಾಗೂ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ, ಗಿಳಿವಿಂಡು ಮಂಜೇಶ್ವರ ಇದರ ಜಂಟಿ ಆಶ್ರಯದಲ್ಲಿ ಜು.27 ರಂದು ಗಿಳಿವಿಂಡಲ್ಲಿ ಆಯೋಜಿಸಲಾಗುವ 'ಕಾವ್ಯ ಸಂಸ್ಕøತಿ ಯಾನ' ಕಾರ್ಯಕ್ರಮದ ಭಾಗವಾಗಿ ಮಂಗಳವಾರ ಸಂಜೆ ಗಿಳಿವಿಂಡಲ್ಲಿ ನಡೆದ ಸ್ವಾಗತ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. 

ರಂಗಮಂಡಲ ತಂಡ ಕರ್ನಾಟಕ ರಾಜ್ಯದಾದ್ಯಂತ ಹಲವು ಜಿಲ್ಲೆಗಳಲ್ಲಿ ಎಲ್ಲ ಸಾಹಿತ್ಯ ಪ್ರೇಮಿ, ಬರಹಗಾರರನ್ನು ಒಗ್ಗೂಡಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೀಗ ಗಡಿನಾಡಲ್ಲಿ ಮೊದಲ ಬಾರಿ ಜು.27 ರಂದು ದಿನಪೂರ್ತಿ ಬಹುಭಾಷೆಗಳ ಸಾಹಿತ್ಯ ಔತಣ ಉಣಬಡಿಸಲು ಎಲ್ಲರ ಸಹಕಾರ ಅಗತ್ಯ. ಕನ್ನಡ ಪರ ಸಂಘಟನೆಗಳು ಒಗ್ಗಟ್ಟಾಗಿ ಬೆಂಬಲಿಸುವರು ಎಂದರು.

ಮಂಜೇಶ್ವರ ಗ್ರಾ.ಪಂ.ಅಧ್ಯಕ್ಷೆ ಜೀನ್ ಲವಿನೋ ಮೊಂತೇರೊ ಅಧ್ಯಕ್ಷತೆ ವಹಿಸಿದ್ದರು. ಗಿಳಿವಿಂಡು ಕಾರ್ಯದರ್ಶಿ ಉಮೇಶ್ ಎಂ.ಸಾಲಿಯಾನ್, ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ರಂಗಭೂಮಿ, ಚಲಚಿತ್ರ ನಿರ್ದೇಶಕಿ ನಿರ್ಮಲಾ ನಾದನ್ ಮೊದಲಾದವರು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು. ಕಾವ್ಯ ಸಂಸ್ಕøತಿ ಯಾನದ ಯಶಸ್ವಗೆ ಸ್ವಾಗತ ಸಮಿತಿ ರಚಿಸಲಾಯಿತು.

ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ.ಆರ್.ಜಯಾನಂದ, ಅಧ್ಯಕ್ಷರಾಗಿ ಜೀನ್ ಲವಿನೊ ಮೊಂತೇರೊ, ಉಪಾಧ್ಯಕ್ಷರಾಗಿ ಸುಂದರ ಬಾರಡ್ಕ, ಸುಭಾಷ್ ಪೆರ್ಲ,ಕರುಣಾಕರ ಶೆಟ್ಟಿ, ರವೀಂದ್ರನ್ ಪಾಡಿ, ಜ್ಯೋತಿಪ್ರಭಾ, ಪ್ರಧಾನ ಕಾರ್ಯದರ್ಶಿಯಾಗಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಜೊತೆ ಕಾರ್ಯದರ್ಶಿಗಳಾಗಿ ನರಸಿಂಹ ಬಲ್ಲಾಳ್, ಜ್ಯೋತಿ, ಕಮಲಾಕ್ಷ ಡಿ., ಸುಜಾತಾ ಶೆಟ್ಟಿ,ವನಿತಾ ಆರ್.ಶೆಟ್ಟಿ, ಸಂತೋಷ್ ಕುಮಾರ್, ಸಂಚಾಲಕರಾಗಿ ಉಮೇಶ್ ಎಂ.ಸಾಲ್ಯಾನ್, ತುಳು ಅಕಾಡೆಮಿ ಕಾರ್ಯದರ್ಶಿ ಪ್ರದೀಪ್ ದೈಗೋಳಿ, ಪುರುಷೋತ್ತಮ ಭಟ್ ಕೆ., ಷ್ಪರಾಜ ಮಾಸ್ತರ್, ಕೃಷ್ಣವೇಣಿ, ದಿವಾಕರ ಅಶೋಕನಗರ, ಪ್ರೇಮ, ಸಂತೋಷ್ ಕುಮಾರ್, ಬಾಲಕೃಷ್ಣ ಶೆಟ್ಟಿಗಾರ್, ಆಶಾ ದಿಲೀಪ್ ಸುಳ್ಯಮೆ, ನವಿತಾ ಶೆಟ್ಟಿ, ಖಜಾಂಜಿಯಾಗಿ ಕಮಲಾಕ್ಷ ಕನಿಲ  ಅವರನ್ನು ಆಯ್ಕೆ ಮಾಡಲಾಯಿತು. 

ಸಮಾರಂಭ ಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೆ ವಿವಿಧ ಸಾಹಿತ್ಯ ಗೋಷ್ಠಿಗಳೊಂದಿಗೆ ನಡೆಯಲಿದೆ. ಗಿಳಿವಿಂಡು ಕಾರ್ಯದರ್ಶಿ ಉಮೇಶ್ ಎಂ.ಸಾಲಿಯಾನ್ ಕಾಸರಗೋಡು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಮಲಾಕ್ಷ ಕನಿಲ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries